ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಹತ್ಯಾ ಪ್ರಯತ್ನ ನಡೆದ ನಂತರ ದೇಶದ ಬಹುತೇಕ ಜನರು ರಹಸ್ಯ ಏಜೆನ್ಸಿ (Secret Service’s) ಮೇಲೆ ವಿಶ್ವಾಸ ಹೊಂದಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ನಡೆದ ನಂತರ ಸಿಐಎ ಡೈರೆಕ್ಟರ್ ಕಿಂಬರ್ಲೈ ಚೇಟ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಟ್ರಂಪ್ ಮೇಲಿನ ಹತ್ಯಾ ಪ್ರಯತ್ನ ಘಟನೆ ಬಗ್ಗೆ ಕಿಂಬರ್ಲೈಗೆ ಲೈವ್ ಚರ್ಚೆಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಿಸುವಂತಾಗಿತ್ತು.
ನೂತನ ಸಮೀಕ್ಷೆಯಲ್ಲಿ, ಅಮೆರಿಕದ ಕೇವಲ ಶೇ.30ರಷ್ಟು ಜನರು ಮಾತ್ರ ಸೀಕ್ರೆಟ್ ಸರ್ವೀಸ್ ಚುನಾವಣೆ ಮೊದಲಿನ ಹಿಂಸಾಚಾರವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂದಾಜು ಶೇ.70ರಷ್ಟು ಜನರು ಡೊನಾಲ್ಡ್ ಟ್ರಂಪ್ ಮೇಲಿನ ಹತ್ಯಾ ಪ್ರಯತ್ನದ ಘಟನೆಗೆ ಸೀಕ್ರೆಟ್ ಸರ್ವೀಸ್ ಹೊಣೆ ಹೊರಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಟ್ರಂಪ್ ಮೇಲಿನ ಹತ್ಯಾ ಪ್ರಯತ್ನದ ಘಟನೆ ಬಗ್ಗೆ ಅಮೆರಿಕದ ಬಹುತೇಕ ಜನರು ಆಕ್ರೋಶಗೊಂಡಿರುವುದಾಗಿ ಸಮೀಕ್ಷೆ ವಿವರಿಸಿದೆ.
ಒಟ್ಟಾರೆ ಶೇ.40ರಷ್ಟು ಮಂದಿ ಘಟನೆಗೆ ಸೀಕ್ರೆಟ್ ಸರ್ವೀಸ್ ಹೊಣೆಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದು, ಇನ್ನುಳಿದ ಶೇ.40ರಷ್ಟು ಜನರು ಗನ್ ಸುಲಭವಾಗಿ ಕೈಗೆ ಸಿಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Tulu Tradition: ಆ.4 ಆಟಿ ಅಮಾವಾಸ್ಯೆ- ರೋಗ ನಿರೋಧಕ ಸಪ್ತಪರ್ಣಿ ಕಷಾಯ