Advertisement
ಆನ್‌ಲಾಕ್ ಮಾಡಿದೇ ತಪ್ಪಾಯ್ತುಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಪಾರದಾಡುತ್ತಿರುವ ಆರೋಗ್ಯಧಿಕಾರಿಗಳು ಲಾಕ್‌ಡೌನ್ ಹಿಂಪಡೆಯುವ ನಿರ್ಧಾರದ ಕುರಿತು ಅಸಮಾಧನ ವ್ಯಕ್ತಪಡಿಸಿದ್ದು, ಆನ್‌ಲಾಕ್ ಮಾಡಲು ಅವಕಾಶ ಮಾಡಿಕೊಟ್ಟಿದ್ದೇ ತಪ್ಪಾಯಿತು. ಇದಕ್ಕಾಗಿ ಈಗ ಭಾರೀ ಪ್ರಮಾಣದ ಬೆಲೆ ತೆರೆಯುವಂತಾಗಿದೆ ಎಂದು ಅಧಿಕಾರಿಗಳು ಹಣೆ ಚಚ್ಚಿಕೊಳ್ಳುತ್ತಿದ್ದಾರೆ.
ಯಥಾ ಪ್ರಜಾ ತಥಾ ರಾಜಾ ಅನ್ನುವಂತೆ ಸೋಂಕು ಪ್ರಾರಂಭದ ಘಟ್ಟದಿಂದ ನಾವು ಸುರಕ್ಷಿತವಾಗಿದ್ದೇವೆ ಹೆದರುವ ಆವಶ್ಯಕತೆಯೇ ಇಲ್ಲ ಎಂಬ ಮೊಂಡುವಾದ ಮಂಡಿಸುತ್ತಾ ಬಂದಿದ್ದ ಅಧ್ಯಕ್ಷ ಟ್ರಂಪ್ ಹಾದಿಯನ್ನೇ ಅಲ್ಲಿನ ಸಾರ್ವಜನಿಕರು ಅನುಸರಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುತ್ತಿಲ್ಲ. ಬೇಕಾಬಿಟ್ಟಿಯಾಗಿ ವರ್ತಿಸುತ್ತ ತಿರುಗಾಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕಿಡಿಕಾರುತ್ತಿದ್ದಾರೆ. ಈ ಮೊದಲು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ, ಸುಧಾರಿಸಿಕೊಳ್ಳುತ್ತಿದ್ದಾರೆ ಎಂದುಕೊಳ್ಳುವಾಗಲೇ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಜನರ ವರ್ತನೆಯಿಂದ ಬೇಸೆತ್ತಿರುವ ಅಧಿಕಾರಿಗಳು ಪಬ್ ಹಾಗೂ ಬಾರ್‌ಗಳನ್ನು ತೆರೆಯಲು ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದುಕೊಳ್ಳುತ್ತಿದ್ದಾರೆ.
Related Articles
ಈ ಮೊದಲು ಹಿರಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಸೋಂಕು ಸದ್ಯ ತನ್ನ ಬಣ ಬದಲಾಯಿಸಿದ್ದು, ಯುವ ಸಮುದಾಯದತ್ತ ತನ್ನ ದೃಷ್ಟಿ ಕೇಂದ್ರೀಕರಿಸಿಕೊಂಡಿದೆ! ಇನ್ನು ಕಳೆದ ಕೆಲ ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಸೋಂಕಿಗೆ ತುತ್ತಾಗುತ್ತಿದ್ದು, ಆ ಪೈಕಿ ಗುಣ ಲಕ್ಷಣ ಹೊಂದಿಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Advertisement
ಈ ಮೂಲಕ ಸೋಂಕು ಸಮುದಾಯ ಮಟ್ಟದಲ್ಲಿ ಪಸರಿಸಿದ್ದು, ಅದರ ಮೂಲ ಪತ್ತೆಯಾಗದ ಕಾರಣ ಯಾರನ್ನು ಎಲ್ಲಿ ಕ್ವಾರಂಟೈನ್ ಮಾಡಬೇಕು, ಯಾರನ್ನು ನಿಗಾದಲ್ಲಿ ಇಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿ¨ªಾರೆ. ಇದಕ್ಕೆ ಧ್ವನಿಗೂಡಿಸಿರುವ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋನಿ ಫೌಸಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಹೇಳಿದ್ದಾರೆ.
ಲಾಕ್‌ಡೌನ್ ವಿನಾಯಿತಿ ನೀಡಿದ ರಾಜ್ಯಗಳುಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದರು ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್‌ಗಳು ಲಾಕ್‌ಡೌನ್ ನಿಬಂಧನೆಗಳನ್ನು ಸಡಿಲಿಕೆ ಮಾಡುತ್ತಿದ್ದು, ಸಂಚಾರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ವಿನಾಯಿತಿ ನೀಡುತ್ತಿದೆ. ಇನ್ನು ಕನೆಕ್ಟಿಕಟ್ ರಾಜ್ಯ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸಲು ಮುಂದಾಗಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೂತನ ಮಾರ್ಗಸೂಚಿಗಳನ್ನು ಘೋಷಿಸಿದೆ. ಆದರೆ ಪ್ಲೋರಿಡಾದಲ್ಲಿ ಮಾತ್ರ ಲಾಕ್‌ಡೌನ್ ನಿರ್ಬಂಧಗಳನ್ನು ಮತ್ತೆ ವಿಧಿಸಲಾಗುತ್ತಿದ್ದು, ಈ ರಾಜ್ಯದಲ್ಲಿ 9 ಸಾವಿರ ಹೊಸ ಪ್ರಕರಣ ದಾಖಲಾಗಿದೆ.