Advertisement

ಅಫ್ಘಾನ್ ನಲ್ಲಿ ಕದನ ವಿರಾಮ :ಅಮೆರಿಕ –ತಾಲಿಬಾನಿಗಳ ನಡುವೆ ಐತಿಹಾಸಿಕ ಒಪ್ಪಂದ

09:02 AM Mar 01, 2020 | sudhir |

ದೋಹಾ (ಕತಾರ್‌): ಅಫ್ಘಾನಿಸ್ಥಾನದಲ್ಲಿ 19 ವರ್ಷಗಳಿಂದ ನಡೆಯುತ್ತಿದ್ದ ರಣರುದ್ರ ರಕ್ತಪಾತಕ್ಕೆ ತೆರೆ ಬಿದ್ದಿದೆ. ಅಫ್ಘಾನ್‌ ನೆಲದಲ್ಲಿ ರಕ್ತಪಾತಕ್ಕೆ ಕಾರಣವಾಗಿದ್ದ ತಾಲಿಬಾನ್‌ ಉಗ್ರರು ಮತ್ತು ಅವರನ್ನು ಹಿಮ್ಮೆಟ್ಟಿಸಲು ಅಲ್ಲಿ 2001ರಿಂದ ಕದನ ನಿರತವಾಗಿದ್ದ ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ. ಮುಂದಿನ 14 ತಿಂಗಳುಗಳಲ್ಲಿ ಅಮೆರಿಕ ಸೇನೆ ಹಂತ-ಹಂತವಾಗಿ ವಾಪಸ್‌ ಹೋಗಲಿದೆ.

Advertisement

ಕತಾರ್‌ ರಾಜಧಾನಿ ದೋಹಾದಲ್ಲಿರುವ ಶೆರಟಾನ್‌ ಹೊಟೇಲ್‌ನಲ್ಲಿ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಪ್ರತಿನಿಧಿ ಝಲ್ಮಯ್‌ ಖಲೀಜಾದ್‌ ಹಾಗೂ ತಾಲಿಬಾನ್‌ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್‌ ಘನಿ ಬರಾದಾರ್‌ ಸಹಿ ಹಾಕಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಸೇರಿ ಪಾಕಿಸ್ಥಾನ, ಇಂಡೋನೇಷ್ಯಾ, ಉಜ್ಬೇಕಿಸ್ಥಾನ, ತಜಕಿಸ್ಥಾನ ಸಹಿತ ಸುಮಾರು 30 ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ವಿಶ್ವ ಸಂಸ್ಥೆಯ ಸದಸ್ಯರು ಈ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ.

ಒಪ್ಪಂದದಂತೆ, ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ 14,000 ತುಕಡಿಗಳು ಹಾಗೂ ನ್ಯಾಟೋದ 17,000 ಸೇನಾ ತುಕಡಿಗಳು ಮುಂದಿನ 14 ತಿಂಗಳುಗಳಲ್ಲಿ ಹಂತಹಂತವಾಗಿ ಸ್ವದೇಶಕ್ಕೆ ಮರಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next