Advertisement

ಅಮೆರಿಕ ಬಂದ್‌ ಅವಧಿ ಐತಿಹಾಸಿಕ 22 ದಿನ ಪೂರ್ಣ

12:30 AM Jan 13, 2019 | Team Udayavani |

ವಾಷಿಂಗ್ಟನ್‌: ಕಳೆದ 22 ದಿನಗಳಿಂದ ಅಮೆರಿಕ ಸರಕಾರದ 8 ಲಕ್ಷಕ್ಕೂ ಹೆಚ್ಚು ನೌಕರರು ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದು, ದೇಶದ ಇತಿಹಾಸದಲ್ಲೇ ಈ ಬಂದ್‌ ಅವಧಿ ಅತಿ ದೀರ್ಘ‌ದ್ದು ಎಂದು ಪರಿಗಣಿಸಲ್ಪಟ್ಟಿದೆ. ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಹಣಕಾಸು ಮೀಸಲಿಡುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾವಕ್ಕೆ ಡೆಮಾಕ್ರಾಟ್‌ ಪಕ್ಷ ನಿರಾಕರಿಸಿದ್ದರಿಂದ ಈ ಸ್ಥಿತಿ ಉಂಟಾಗಿದೆ. ಅನಂತರದಲ್ಲಿ ನಡೆದ ಹಲವು ಸಂಧಾನ ಸಭೆಗಳೂ ವಿಫ‌ಲವಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಟ್ರಂಪ್‌ ಬೆದರಿಕೆಯನ್ನೂ ಹಾಕಿದ್ದಾರೆ. ಈ ಹಿಂದೆ ವಿವಿಧ ಕಾರಣಗಳಿಗೆ ಒಂದೆರಡು ವಾರಗಳವರೆಗೆ ಬಂದ್‌ ನಡೆದಿತ್ತು. 1995-96 ರಲ್ಲಿ ಬಿಲ್‌ ಕ್ಲಿಂಟನ್‌ ಅವಧಿಯಲ್ಲಿ 21 ದಿನಗಳವರೆಗೆ ಸರಕಾರ ಭಾಗಶಃ ಬಂದ್‌ ಆಗಿತ್ತು. ಇದೀಗ ಈ ಇತಿಹಾಸವನ್ನೂ ಟ್ರಂಪ್‌ ಸರಕಾರ ಮೀರಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next