Advertisement
ಏಷಿಯನ್ ಫಿಶರೀಸ್ ಸೊಸೈಟಿ ಭಾರತೀಯ ಶಾಖೆಯ ಆಶ್ರಯದಲ್ಲಿ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಲಾದ “ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡಲು ಅಕ್ಷಯಪಾತ್ರೆಯಲ್ಲ. ಬಗೆದಷ್ಟು ಮೀನುಗಳು ಸಿಗುವ ಬಗ್ಗೆ ಮಾತ್ರ ಯೋಚಿಸಿದರೆ, ಮುಂದಿನ ದಿನಗಳಲ್ಲಿ ಮೀನುಗಾರಿಕೆ ಕಷ್ಟವಾಗಬಹುದು. ಹೀಗಾಗಿ ಅದನ್ನು ಉಳಿಸುವ ಜವಾಬ್ದಾರಿ ಮೀನುಗಾರರದ್ದಾಗಿದೆ. ಇದಕ್ಕೆಲ್ಲ ಸೂಕ್ತ ನಿಯಮದ ಚೌಕಟ್ಟಿರಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಕೇರಳದಲ್ಲಿ ಜಾರಿಯಲ್ಲಿರುವ ಕಾಯ್ದೆಗೆ ವಿಶೇಷ ತಿದ್ದುಪಡಿ ತಂದು ಕಟ್ಟುನಿಟ್ಟು ಮಾಡಲಾಗಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ಕೆಲವು ತಿದ್ದುಪಡಿಯನ್ನು ಪ್ರಸ್ತಾವಿಸಲಾಗಿದ್ದು, ಕೆಲವೇ ತಿಂಗಳಿನಲ್ಲಿ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.
Related Articles
Advertisement
ಬುಲ್‌ಟ್ರಾಲ್‌ನಂತಹ ಮೀನು ಸಂತತಿಗೇ ಮಾರಕವಾಗುವ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದ್ದರೂ ಅದರ ಅನುಷ್ಠಾನ ಮಾಡುವುದು ಸವಾಲಿನ ಕೆಲಸವಾಗಿದೆ. ಲೈಟ್‌ಫಿಶಿಂಗ್ ಕ್ರಮವೂ ಮೀನುಗಾರಿಕೆಗೆ ಮಾರಕ ಎಂದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಉದ್ಘಾಟಿಸಿದರು. ಮೀನುಗಾರಿಕಾ ಕಾಲೇ ಜಿನ ಡೀನ್ ಡಾ| ಎ. ಸೆಂಥಿಲ್ ವೇಲ್ ಮುಖ್ಯ ಅತಿಥಿತಾಗಿದ್ದರು. ಏಶ್ಯನ್ ಮೀನುಗಾರಿಕಾ ಸೊಸೈಟಿ ಕಾರ್ಯದರ್ಶಿ ಡಾ| ಪಿ. ಕೇಶವನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಡಾ| ಬಿ.ಎ. ಶ್ಯಾಮಸುಂದರ್ ಉಪಸ್ಥಿತರಿ ದ್ದರು. ಮೀನುಗಾರಿಕಾ ಕಾಲೇಜು ಉಪ ನ್ಯಾಸಕ ಡಾ| ಎಸ್.ಎಂ. ಶಿವಪ್ರಕಾಶ್ ವಂದಿ ಸಿದರು. ಡಾ| ಮೃದುಲಾ ನಿರೂಪಿಸಿದರು. “ಸಮುದ್ರ ಮಾಲಿನ್ಯ; ಮೀನುಗಾರಿಕೆಗೆ ನಿರಾಶೆ’
ಮೀನುಗಾರಿಕಾ ಕಾಲೇಜಿನ ಡೀನ್ ಡಾ| ಎ. ಸೆಂಥಿಲ್ ವೇಲ್ ಮಾತ ನಾಡಿ, ಸಾಗರ ಮೀನುಗಾರಿಕೆ ವಿಷಯದಲ್ಲಿ ಬಹಳ ನಿರಾಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ. ಇದಕ್ಕೆ ಸಮುದ್ರವನ್ನು ಬಾಧಿಸುವ ಮಾಲಿನ್ಯ ಕಾರಣವಾಗಿದೆ. ಕಾನೂನುಬಾಹಿರ, ಅನಿಯಂತ್ರಿತ ಮೀನುಗಾರಿಕೆಯಿಂದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕಡಲಿನ ಸಂಪನ್ಮೂಲಗಳನ್ನು ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕು. ಈ ಉದ್ದೇಶದಿಂದಾಗಿ ಏಷ್ಯನ್ ಮೀನುಗಾರಿಕಾ ಸೊಸೈಟಿ ಕಡಲ ಮೀನುಗಾರಿಕೆ ಸುಧಾರಣೆ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.