Advertisement
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದೆ. ಪ್ರತಿ ವರ್ಷ ಡ್ರಗ್ಸ್ ಮಾರಾಟ ಪ್ರಕರಣಗಳ ಸಂಖ್ಯೆ 1,100ರಿಂದ 1,660ರ ವರೆಗೆ ದಾಖಲಾಗುತ್ತಿತ್ತು. ಈ ವರ್ಷ 3,852 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 2,255 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಇದುವರೆಗೂ ಎಫ್ಎಸ್‌ಎಲ್ ವರದಿ ಬರುವುದು ತಡವಾಗುತ್ತಿತ್ತು. ಈಗ ಒಂದೇ ಸಾರಿ 51 ಸ್ಯಾಂಪಲ್ ಪರೀಕ್ಷೆಗೆ ಅವಕಾಶ ಇದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ 5 ಕಡೆ ಎಫ್ಎಸ್‌ಎಲ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಅಕ್ರಮವಾಗಿ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿರುವುದನ್ನು ರಾಜ್ಯ ಸರಕಾರ ಬೇಧಿಸಿದ್ದು, 21 ಡಾರ್ಕ್ ವೆಬ್ ಪೋರ್ಟಲ್‌ಗಳನ್ನು ಪತ್ತೆಹಚ್ಚಲಾಗಿದೆ. ಡಾರ್ಕ್ ವೆಬ್‌ಗಳ ಮೂಲಕ ಮಾನವ ಮಾರಾಟ ಜಾಲವೂ ಸಕ್ರಿಯವಾಗಿದೆ. ಅಕ್ರಮ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಈಗಿರುವ ಎನ್‌ಡಿಪಿಎಸ್ ಕಾಯ್ದೆ ದುರ್ಬಲವಾಗಿದ್ದು,ಅದನ್ನು ಬಲಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.