Advertisement

ರಾಜೀವ್‌ಗಾಂಧಿ ವಿವಿ ಕುಲಸಚಿವರ ನೇಮಕಕ್ಕೆ ತಿದ್ದುಪಡಿ

06:37 AM Feb 15, 2019 | Team Udayavani |

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲ ಸಚಿವರ ನೇಮಕ ಮಾಡಲು ಕಾಯ್ದೆ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದ್ದ ವಿಧೇಯಕಕ್ಕೆ ಬಿಜೆಪಿ ಗಲಾಟೆಯ ನಡುವೆಯೇ ವೈದ್ಯಕೀಯ ಶಿಕ್ಷಣ ಸಚಿವ ಇ ತುಕಾರಾಂ ಒಪ್ಪಿಗೆ ಪಡೆದುಕೊಂಡರು.

Advertisement

ಕುಲಸಚಿವರ ನೇಮಕಕ್ಕೆ ಕಡ್ಡಾಯವಾಗಿ ಐದು ವರ್ಷ ಪ್ರೊಫೇಸರ್‌ ಆಗಿ ಕೆಲಸ ಮಾಡಿರುವ ಅನುಭವ ಹೊಂದಿರಬೇಕು ಎನ್ನುವ ನಿಬಂಧನೆಯನ್ನು ಸಡಿಲಗೊಳಿಸಲು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಯ್ದೆ ಸದನದಲ್ಲಿ ಅಂಗೀಕಾರ ತಕ್ಷಣವೇ ಹಾಲಿ ಮೌಲ್ಯಮಾಪನ ಕುಲಸಚಿವ-

ಡಾ. ಎಂ.ಕೆ. ರಮೇಶ್‌ ಅವರನ್ನು ಬಿಡುಗಡೆಗೊಳಿಸಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರ ಹುದ್ದೆಗೆ ವರ್ಗಾಯಿಸಲಾಗಿದೆ. ಮೌಲ್ಯಮಾಪನ ಕುಲ ಸಚಿವ ಹುದ್ದೆಗೆ ಕಿದ್ವಾಯಿ ಸಂಸ್ಥೆ ಪ್ರಾಧ್ಯಾಪಕ ಡಾ. ಕೆ.ಬಿ. ಲಿಂಗೇಗೌಡ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next