Advertisement

ಅಮೆರಿಕದ ಪೌರತ್ವ ನೀತಿಗೆ ತಿದ್ದುಪಡಿ

12:22 AM Jul 10, 2019 | Team Udayavani |

ವಾಷಿಂಗ್ಟನ್‌: ಅಮೆರಿಕದ ಪೌರತ್ವ ನೀತಿಯಲ್ಲಿ ಮಹತ್ವದ ಬದಲಾವಣೆಗೆ ಸಂಸದರು ನಿರ್ಧರಿ ಸಿದ್ದು, ಭಾರತದ ಮಾಹಿತಿ ತಂತ್ರ ಜ್ಞಾನ ವೃತ್ತಿಪರರಿಗೆ ಅನುಕೂಲವಾಗುವ ಸಾಧ್ಯತೆಯಿದೆ. ಒಂದು ದೇಶಕ್ಕೆ ಗರಿಷ್ಠ ಶೇ. 7 ರಷ್ಟು ಮಿತಿಯನ್ನು ಈ ಹಿಂದಿನ ನೀತಿ ವಿಧಿಸಿತ್ತಾದರೂ, ಅದನ್ನು ತೆಗೆದುಹಾಕಲು ಮಸೂದೆಯನ್ನು ಮಂಡಿಸಲಾಗುತ್ತಿದೆ. ಈ ಮಸೂದೆಗೆ 310 ಸಂಸದರ ಬೆಂಬಲವಿದ್ದು, ಸುಲಭವಾಗಿ ಅನುಮೋದನೆ ಪಡೆಯಲಿದೆ.

Advertisement

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರು ದಶಕಗಳಿಂದಲೂ ಕಾಯಂ ಪೌರತ್ವಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಎಚ್‌1 ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿರುವ ಕೆಲವು ಭಾರತೀಯರಂತೂ 70 ವರ್ಷ ಗಳಿಂದಲೂ ಕಾಯಂ ಪೌರತ್ವಕ್ಕೆ ಕಾಯುತ್ತಿದ್ದಾರೆ ಎಂದು ಇತ್ತೀಚಿಗಿನ ಸಮೀಕ್ಷೆಯೊಂದು ವರದಿ ಮಾಡಿತ್ತು. ಭಾರತದಿಂದ ಉನ್ನತ ಕೌಶಲ್ಯ ಹೊಂದಿರುವವರು ಅಮೆರಿಕಕ್ಕೆ ತೆರಳುವುದರಿಂದಾಗಿ, ದೇಶಕ್ಕೆ ಶೇ. 7ರ ಮಿತಿಯನ್ನು ತೆಗೆದುಹಾಕುವುದರಿಂದ ಭಾರತೀಯರಿಗೇ ಹೆಚ್ಚು ಅನುಕೂಲವಾಗಲಿದೆ.

ಈ ಮಸೂದೆಗೆ ಭಾರತೀಯ ಮೂಲದ ಸಂಸದೆ, ಅಮೆರಿಕ ಅಧ್ಯಕ್ಷೀಯ ಹುದ್ದೆಯ ಆಕಾಂಕ್ಷಿ ಕಮಲಾ ಹ್ಯಾರಿಸ್‌ ಸೇರಿದಂತೆ ಹಲ ವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಸೂದೆಗೆ ಡೆಮಾಕ್ರಾಟ್‌ ಮತ್ತು ರಿಪಬ್ಲಿಕನ್‌ ಪಕ್ಷದ ಸದ ಸ್ಯರೂ ಬೆಂಬಲ ವ್ಯಕ್ತಪಡಿಸಿದ್ದು, ಸುಲಭವಾಗಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next