Advertisement

ತಿದ್ದುಪಡಿ, ವಿಳಾಸ ಬದಲಾವಣೆಗೆ ಪ್ರತ್ಯೇಕ ಅರ್ಜಿ

06:55 AM Apr 02, 2018 | |

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಏ.14ರವರೆಗೆ ಅವಕಾಶ ಇರುವಂತೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ತಿದ್ದುಪಡಿ ಮಾಡಲು, ಹೆಸರು ಮತ್ತು ವಿಳಾಸ ಬದಲಾವಣೆಗೆ ಇನ್ನೂ 13 ದಿನ ಸಮಯವಿದೆ. ಆದರೆ, ಮತದಾರರು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ,ಇದಕ್ಕಾಗಿ ಕೇವಲ ಫಾರಂ ಭರ್ತಿ ಮಾಡಿಕೊಟ್ಟು ನಮ್ಮ ಜವಾಬ್ದಾರಿ ಮಗಿಯಿತು ಎಂದು ತಿಳಿದು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ತಿದ್ದುಪಡಿ, ವಿಳಾಸ ಬದಲಾವಣೆಗೆ ಅದರದೇ ಆದ ಪ್ರತ್ಯೇಕವಾದ ಅರ್ಜಿ ನಮೂನೆ ಭರ್ತಿ ಮಾಡಬೇಕು.

Advertisement

ಬೆಂಗಳೂರು: ಬರೀ ಅರ್ಜಿ ಸಲ್ಲಿಸುವುದರಿಂದ ಪರಿಹಾರ ಸಿಗುವುದಿಲ್ಲ. ತಿದ್ದುಪಡಿ, ವಿಳಾಸ ಬದಲಾವಣೆಗೆ ಅದರದೇ ಆದ ಪ್ರತ್ಯೇಕ ಅರ್ಜಿ ನಮೂನೆಗಳಿವೆ. ಆ ಅರ್ಜಿ ನಮೂನೆಗಳ ಸಲ್ಲಿಕೆಗೆ ಅದರದೇ ಆದ ಪ್ರಕ್ರಿಯೆ ಇರುತ್ತದೆ. ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ನಾವು ಅರ್ಜಿ ತುಂಬಿದ್ದೇವೆ ಎಂದು ಈಗ ಸುಮ್ಮನೆ ಕುಳಿತುಕೊಂಡರೆ, ಮತದಾನದ ದಿನ ಸಮಸ್ಯೆ ಎದುರಿಸುವುದು ಅಥವಾ ಮತದಾನದಿಂದ ವಂಚಿತರಾಗುವುದು ನೀವೆ. ಈ ಕೊನೆ ಘಳಿಗೆಯಲ್ಲಿ ಯಾವ ಅಧಿಕಾರಿಯೂ ನಿಮ್ಮ ನೆರವಿಗೆ ಬರಲು ಸಾಧ್ಯವಿಲ್ಲ.

ಮುಖ್ಯವಾಗಿ ವಿಳಾಸ ಬದಲಾವಣೆ ವೇಳೆ ಅರ್ಜಿ ನಮೂನೆ- 7ರ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದೇ ಹೋದರೆ ವಿಳಾಸ ಬದಲಾವಣೆ ಆಗುವುದಿಲ್ಲ. ಮತದಾರನು ಬೇರೆ ಮತಕ್ಷೇತ್ರಕ್ಕೆ ಸ್ಥಳಾಂತರ ಅಥವಾ ವರ್ಗಾವಣೆ ಆಗಿದ್ದರೆ,  ಆಗ ನೀವು ಅರ್ಜಿ ನಮೂನೆ-7 ಬಳಸಬೇಕು. ಬಳಿಕ ತಾವು ಈ ಹಿಂದೆ ವಾಸವಾಗಿದ್ದ ಕ್ಷೇತ್ರದ ಸಂಬಂಧಪಟ್ಟ ಚುನಾವಣಾ ಕಚೇರಿ ಅಥವಾ ಚುನಾವಣಾಧಿಕಾರಿಗಳಿಂದ ಸ್ವೀಕೃತಿ ಪತ್ರ ಪಡೆದು ಅಗತ್ಯ ದಾಖಲೆಗಳೊಂದಿಗೆ ನೀವು ವರ್ಗಾವಣೆಗೊಂಡಿರುವ ಮತಕ್ಷೇತ್ರದ ಸಂಬಂಧಪಟ್ಟ ಚುನಾವಣಾ ಕಚೇರಿ ಅಥವಾ ಚುನಾವಣಾಧಿಕಾರಿಗಳಿಗೆ ಫಾರಂ ಸಂಖ್ಯೆ 9 ಭರ್ತಿ ಮಾಡಿಕೊಡಬೇಕು. ಆಗ ಹಳೆಯ ಕ್ಷೇತ್ರದ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ತೆಗೆದು ಹಾಕಿ, ಹೊಸ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮರಣ ಹೊಂದಿದ್ದರೆ ಅಥವಾ ಹೆಸರು ಮತ್ತು ವಿಳಾಸ ತಪ್ಪು ನಮೂದು ಆಗಿದ್ದರೂ ಫಾರಂ 7 ಬಳಸಬೇಕು.

ನಿಮ್ಮ ಮನೆ ಬೇರೆ ಮತ ಕ್ಷೇತ್ರಕ್ಕೆ ಬದಲಾಯಿಸಿದರೆ, ಆಗ ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರ ಆ ಪ್ರದೇಶಕ್ಕೆ ವರ್ಗಾಯಿಸಲು ಅರ್ಜಿ ನಮೂನೆ 9  ಬಳಸಬೇಕು. ಇದರ ಜೊತೆಗೆ ವಿಳಾಸ ಪುರಾವೆಗೆ ಅರ್ಜಿದಾರ ಬ್ಯಾಂಕ್‌, ಅಂಚೆ ಕಚೇರಿಯ ಪ್ರಸ್ತುತ ಪಾಸ್‌ ಬುಕ್‌, ಪಡಿತರ ಚೀಟಿ ಅಥವಾ ಡ್ರೈವಿಂಗ್‌ ಲೈಸೆನ್ಸ್‌, ಆದಾಯ ಪ್ರಮಾಣ ಪತ್ರ ಅಥವಾ ಅರ್ಜಿದಾರ ಅಥವಾ ಅವರ ಪೋಷಕರ ಹೆಸರಲ್ಲಿರುವ ಆ ವಿಳಾಸದ ಇತ್ತೀಚಿನ ನೀರು, ದೂರವಾಣಿ, ವಿದ್ಯುತ್ಛಕ್ತಿ, ಗ್ಯಾಸ್‌ ಸಂಪರ್ಕದ ಬಿಲ್‌ ಸಲ್ಲಿಸಬೇಕು. ಮತದಾರರ ಪಟ್ಟಿ ಅಥವಾ ಮತದಾರ ಗುರುತಿನ ಚೀಟಿಯಲ್ಲಿ ತಪ್ಪು ಆಗಿದ್ದರೆ, ಅದನ್ನು ಸರಿಪಡಿಸಲಿಕ್ಕೆ ಫಾರಂ 8 ಬಸಳಬೇಕು.ಒಂದೇ ಕ್ಷೇತ್ರದಲ್ಲಿ ಮನೆ ಬದಲಾಯಿಸಿದ್ದರೆ ಸಂಬಂಧಪಟ್ಟ ಮತಗಟ್ಟೆಯಲ್ಲಿ ಹೆಸರು ಸೇರಿಸಲು ಅರ್ಜಿ ಮಮೂನೆ 8ಎ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next