ಮಂಡ್ಯ: ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ .ನಂಜುಂಡೇಗೌಡ ಹೇಳಿದರು.
ನಗರದಹೊಸಹಳ್ಳಿ ಬಡಾವಣೆಯತಂಪು ಮಾರಮ್ಮದೇವಸ್ಥಾನದ ಆವರಣದಲ್ಲಿ ಬಿಜೆಪಿ ಹಾಗೂ ರೈತ ಮೋರ್ಚಾ ವತಿಯಿಂದ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ನೂತನ ಕೃಷಿ ಕಾಯ್ದೆ ಕರಪತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ಮೋದಿಯವರು ತಜ್ಞರ ಸಮಿತಿ ರಚಿಸಿದ್ದು, ಆ ಸಮಿತಿ ನೀಡಿದ ವರದಿ ಆಧಾರದ ಮೇಲೆ, 1955ರಲ್ಲಿ ಎಪಿಎಂಸಿ ಕಾಯ್ದೆ ಜಾರಿಗೊಳಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ಸರ್ಕಾರಗಳು ಇದಕ್ಕೆ ತಿದ್ದುಪಡಿ ತಂದಿರಲಿಲ್ಲ. ಎಲ್ಲ ಕಾಯ್ದೆಗಳಿಗೂ ಕಾಲ ಕಾಲಕ್ಕೆ ಬದಲಾವಣೆ, ತಿದ್ದುಪಡಿ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿ:ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕು. ಅವರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬರಬೇಕು.ಎಪಿಎಂಸಿಗಳಲ್ಲಿ ಮಾರಾಟ ಮಾಡಲು ರೈತ ಹೋದರೆ ಅವನಿಗೆ ಶೋಷಣೆಯಾಗುತ್ತದೆ. ದಲ್ಲಾಳರು, ವರ್ತಕರು ವಂಚಿಸಿ ಕಡಿಮೆ ಬೆಲೆಗೆ ಖರೀದಿ ಮಾಡಿಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತ ತಾನುಬೆಳೆದಉತ್ಪನ್ನವನ್ನು ದೇಶದ ಯಾವುದೇ ಮೂಲೆಗಾದರೂ ಮಾರಾಟ ಮಾಡುವ ಹಕ್ಕು ಇರಬೇಕು ಎಂಬ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ತಪ್ಪೇ ಎಂದು ಪ್ರಶ್ನಿಸಿದರು.
ಎಪಿಎಂಸಿ ಮತ್ತು ಮಾರುಕಟ್ಟೆಗಳ ಆಯಕಟ್ಟಿನ ಸ್ಥಳಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಏಜೆಂಟರು, ವರ್ತಕರು, ದಲ್ಲಾಳಿಗಳು ಇದ್ದಾರೆ. ಅವರನ್ನು ಉದ್ಧಾರ ಮಾಡಲು ರೈತರಿಗೆ ಅನ್ಯಾಯವಾದರೂ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅರಿವಿಗಾಗಿ ಅಭಿಯಾನ ಪ್ರಾರಂಭ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕಾಯ್ದೆಗಳ ಕುರಿತಂತೆ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಕರಪತ್ರ ವಿತರಣಾ ಅಭಿಯಾನ ಪ್ರಾರಂಭಮಾಡಿದ್ದೇವೆ. ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ, ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದರು. ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ: ಮಂಡ್ಯ ನಗರದಲ್ಲಿ ಕಾಂಗ್ರೆಸ್ಸಿಗರು ರೈತ ಪರವಾಗಿ ಸಭೆ ಮಾಡಿದ್ದರೋಅದೇ ಮಾದರಿಯಲ್ಲಿ ದೊಡ್ಡ ಸಭೆ ನಡೆಸಿ, ಅದಕ್ಕೆ ತಕ್ಕ ಉತ್ತರ ಕೊಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರುಮಾಡುತ್ತೇವೆ. ಮಂಡ್ಯದಲ್ಲಿ ಬಿಜೆಪಿಗೂ ಶಕ್ತಿ ಇದೆ. ಅದನ್ನು ಸಾಧಿಸಿ ತೋರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗೀಗೌಡ, ನಗರಾಧ್ಯಕ್ಷ ಹೊಸಹಳ್ಳಿ ಶಿವು, ಬಿಜೆಪಿ ನಗರಾಧ್ಯಕ್ಷವಿವೇಕ್, ಮನ್‌ಮುಲ್ ನಿರ್ದೇಶಕಿ ರೂಪ, ಮುಖಂಡರಾದ ಜವರೇಗೌಡ, ಸಿದ್ದರಾಜು,ಮಲ್ಲಿಕಾರ್ಜುನ, ಮಾದರಾಜೇ ಅರಸ್, ಶಿವಲಿಂಗೇಗೌಡ, ಹೊನ್ನಪ್ಪ ಹಾಜರಿದ್ದರು.