Advertisement

ವಂಚನೆ ಪ್ರಕರಣ: ಬಾಲಿವುಡ್‌ ನಟಿ ಅಮೀಶಾ ಪಟೇಲ್‌ ಕೋರ್ಟ್‌ಗೆ ಶರಣು

10:21 AM Jun 19, 2023 | Shreeram Nayak |

ಜಾರ್ಖಂಡ್: ವಂಚನೆ ಮತ್ತು ಚೆಕ್‌ ಬೌನ್ಸ್‌ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಅಮೀಶಾ ಪಟೇಲ್‌ ಅವರು ರಾಂಚಿ ಸಿವಿಲ್‌ ಕೋರ್ಟ್‌ಗೆ ಶರಣಾಗಿದ್ದಾರೆ. ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ, ಜೂ.21ರಂದು ಖುದ್ದು ಕೋರ್ಟ್‌ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

Advertisement

2018ರಲ್ಲಿ ಜಾರ್ಖಂಡ್‌ ಮೂಲದ ಸಿನಿಮಾ ನಿರ್ಮಾಪಕ ಅಜಯ್‌ ಕುಮಾರ್‌ ಸಿಂಗ್‌ ನಟಿಯ ವಿರುದ್ಧ ವಂಚನೆ ಮತ್ತು ಚೆಕ್‌ ಬೌನ್ಸ್‌ ಕೇಸು ದಾಖಲಿಸಿದ್ದರು.

ಹಲವು ಬಾರಿ ಸಮನ್ಸ್‌ ಜಾರಿ ಮಾಡಿದರೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಮೀಶಾ ವಿರುದ್ಧ ವಾರಂಟ್‌ ಜಾರಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next