Advertisement

ಅಮೀನರಡ್ಡಿ ಯಾಳಗಿ ನಾಳೆ ಬಿಜೆಪಿ ಸೇರ್ಪಡೆ?

08:58 PM Apr 11, 2021 | Team Udayavani |

ಶಹಾಪುರ: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಶಹಾಪುರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಮೀನರಡ್ಡಿ ಯಾಳಗಿ ಏ. 12ರಂದು ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ 23 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಪರಾಜಯಗೊಂಡಿದ್ದರು. ಆದರೆ ಮೊದಲ ಸ್ಪರ್ಧೆಯಲ್ಲಿಯೇ ವಿವಿಧ ಪಕ್ಷದ ರಾಜಕಾರಣಿಗಳು ಹುಬ್ಬೇರಿಸುವಂತೆ ಚುನಾವಣಾ ಕಣದಲ್ಲಿ ಹೆಸರು ಮಾಡಿದ್ದರು. ಇದೀಗ ಅವರು ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಸಬೇಕೆಂಬ ಬಹು ದೊಡ್ಡ ಅಜೆಂಡಾ ಹೊಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೆ ಬಿಜೆಪಿ ಹೈಕಮಾಂಡ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಸ್ಥಳೀಯ ಮುಖಂಡರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ ಅವರನ್ನು ಭೇಡಿ ಮಾಡಿದ್ದು, ಬಿಜೆಪಿ ಸೇರ್ಪಡೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಮೀನರಡ್ಡಿ ಅವರು ಯಾವುದೇ ಷರತ್ತುಗಳನ್ನು ಹಾಕದೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಅವರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಹೆಚ್ಚಾಗಲಿದೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಅವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸಿದವರಿಗೆ ಸೂಕ್ತ ಸ್ಥಾನಮಾನ ನೀಡುವುದು ಪಕ್ಷದ ಆದ್ಯತೆಯಾಗಿದೆ. ಯಾರೇ ಆಗಲಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಇರಲಿದೆ ಎಂದು ಪಕ್ಷದ ಸ್ಥಳೀಯ ಹಿರಿಯ ಮುಖಂಡರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next