Advertisement

Hyderabad ತಡವಾದ ಆ್ಯಂಬುಲೆನ್ಸ್‌ : ರಸ್ತೆಯಲ್ಲೇ ಹೆರಿಗೆ!

10:21 PM Aug 25, 2023 | Team Udayavani |

ಹೈದರಾಬಾದ್‌: ತೆಲಂಗಾಣದ ನಿರ್ಮಲ್‌ ಜಿಲ್ಲೆಯ ಕುಗ್ರಾಮವೊಂದರಲ್ಲಿ ಆ್ಯಂಬುಲೆನ್ಸ್‌ ಬರಲು ತಡವಾದ ಹಿನ್ನೆಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ.

Advertisement

ತುಳಸಿಪೇಟೆಯ ನಿವಾಸಿಯಾಗಿರುವ ಗಂಗಾಮಣಿ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ದೂರದ ಕುಗ್ರಾಮಕ್ಕೆ ಸರಿಯಾಗಿ ರಸ್ತೆ ಸಂಪರ್ಕವಿಲ್ಲದ ಕಾರಣ, ಆ್ಯಂಬುಲೆನ್ಸ್‌ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲೇ ಆಸ್ಪತ್ರೆ ತಲುಪಲು ಗಂಗಾಮಣಿ ಅವರು ಮುಂದಾದಾಗ ರಸ್ತೆಯಲ್ಲೇ ಹೆರಿಗೆಯಾಗಿದೆ. ಬಳಿಕ ಕೆಲವೇ ಸಮಯದಲ್ಲಿ ಆ್ಯಂಬುಲೆನ್ಸ್‌ ಬಂದಿದ್ದು, ಅದರೊಂದಿಗೆ ಬಂದಿದ್ದ ವೈದ್ಯರು ಮಗು ಮತ್ತು ತಾಯಿಗೆ ಸುಶ್ರೂಷೆ ಮಾಡಿದ್ದಾರೆ. ನಂತರದಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next