ರಾಯಚೂರು: ಎಲ್ಲೆಲ್ಲಿ ಅಂಬಲೆನ್ಸ್‌ಗಳಿವೆ ಅಲ್ಲೆಲ್ಲ ಚಾಲಕರ ನಿಯೋಜನೆಗೆ ಆದ್ಯತೆ ನೀಡಲಾಗುವುದು. ಯಾವುದೇ ವಾಹನ ನಿರುಪಯುಕ್ತವಾಗದಂತೆ ನೋಡಿಕೊಳ್ಳಲು ಸಂಬಂ ಧಿಸಿದ ಅಧಿ ಕಾರಿಗಳಿಗೆ ಸೂಚಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ನಗರದ ಸಂಸದರ ಕಚೇರಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯಡಿ ಖರೀದಿಸಿದ ಆರು ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ಗಳಿದ್ದಲ್ಲಿ ಚಾಲಕರಿಲ್ಲ. ಚಾಲಕರಿದ್ದಲ್ಲಿ ಆಂಬ್ಯುಲೆನ್ಸ್‌ಗಳಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ನಾವು ಯಾವುದೇ ವಾಹನ ನಿರುಪಯುಕ್ತವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಜಮೀನು ಮಾಲೀಕರು, ಗ್ರಾಮ ಲೆಕ್ಕಾಧಿ ಕಾರಿ ತಪ್ಪಿನಿಂದ ಪಹಣಿಯಲ್ಲಿ ಬೆಳೆಗಳ ತಪ್ಪು ಮಾಹಿತಿ ದಾಖಲಾಗುತ್ತಿದೆ. ಇದರಿಂದ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗುತ್ತಿದೆ. ಅದನ್ನು ವಿಎಗಳು ಹೆಚ್ಚು ಗಮನ ಕೊಡಬೇಕು. ಈಗಾಗಲೇ ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದು, ಅನೇಕ ರೈತರ ಖಾತೆಗೆ ಪರಿಹಾರ ಹಣ ಕೂಡ ಬಂದಿದೆ ಎಂದರು.
ರೈತರ ಆತ್ಮಹತ್ಯೆಗೆ ನಿಖರ ಕಾರಣವಾಗಿದ್ದಲ್ಲಿ ಕೂಡಲೇ ಪರಿಹಾರ ನೀಡಬೇಕು ಎಂಬ ನಿಯಮವಿದೆ. ರೈತರಿಗೆ ಪರಿಹಾರ ನೀಡಬೇಕಾದರೂ ಕೆಲವೊಂದು ನಿಯಮಗಳಿದ್ದು, ಆ ಪ್ರಕಾರವೇ ನೀಡಲಾಗುತ್ತಿದೆ. ಏನಾದರೂ ಸಮಸ್ಯೆಗಳಾದಲ್ಲಿ ಸಂಬಂ ಧಿಸಿದ ಅಧಿ ಕಾರಿಗಳು ಪರಿಶೀಲಿಸುವರು ಎಂದರು. ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ವಿವಿಧ ಮುಖಂಡರು ಇದ್ದರು