Advertisement

ಆಂಬುಲೆನ್ಸ್ ಚಾಲಕನ ಬಂಧನ

02:47 PM May 29, 2021 | Team Udayavani |

ಬೆಂಗಳೂರು: ಕೊರೊನಾ ಸೋಂಕಿನಿಂದಮೃತಪಟ್ಟ ವ್ಯಕ್ತಿಯ ಶವವನ್ನು ಚಿತಗಾರಕ್ಕೆಕೊಂಡೊಯ್ಯಲು ಹೆಚ್ಚು ಹಣಕ್ಕೆ ಬೇಡಿಕೆಇಟ್ಟಿದಲ್ಲದೆ, ಮೃತದೇಹವನ್ನು ರಸ್ತೆ ಬದಿಯಲ್ಲಿ ಇಟ್ಟು ಪರಾರಿಯಾಗಿದ್ದ ಆ್ಯಂಬುಲೆನ್ಸ್‌ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರು ಜಿಲ್ಲೆ ತುರವೇಕೆರೆಯ ಶರತ್‌ಬಂಧಿತ. ಆರೋಪಿ ಎರಡು ಆ್ಯಂಬುಲೆನ್ಸ್‌ಇಟ್ಟುಕೊಂಡಿದ್ದು, ಮೇ 24ರಂದು ತಡರಾತ್ರಿಬಿಹಾರ ಮೂಲದ ಅಮೃತ್‌ ಸಿಂಗ್‌ (53)ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಅವರ ಸಂಬಂಧಿಕರ ಸೂಚನೆಯಂತೆ ಹೆಬ್ಟಾಳದ ಚಿತಾಗಾರಕ್ಕೆ ಮೃತದೇಹ ಕೊಂಡೊಯ್ಯ ಬೇಕಿತ್ತು.ಮಾರ್ಗ ಮಧ್ಯೆ ಆರೋಪಿ 15 ಸಾವಿರ ರೂ.ಗೆಬೇಡಿಕೆ ಇಟ್ಟಿದ್ದಾನೆ. ಆ ಹಣ ಕೊಡಲುಸಾಧ್ಯವಿಲ್ಲ. ಅಷ್ಟು ಹಣವಿಲ್ಲ ಎಂದು ಮೃತರ ಕಡೆಯವರು ಹೇಳಿದ್ದಾರೆ.ಅದಕ್ಕೆ ಕೋಪಗೊಂಡ ಆರೋಪಿ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ರಸ್ತೆಯೊಂದರ ಬದಿಯಲ್ಲಿ ಮೃತದೇಹವನ್ನು ಇಟ್ಟು ಪರಾರಿಯಾಗಿದ್ದ.

ಬಳಿಕ ಅಮೃತ್‌ ಸಿಂಗ್‌ ಕುಟುಂಬಸದಸ್ಯರು ಮತ್ತೂಂದು ವಾಹನ ಮಾಡಿಕೊಂಡು ಅಂತ್ಯಕ್ರಿಯೆ ನಡೆಸಿದ್ದರು. ಈ ವಿಚಾರ ತಿಳಿದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next