Advertisement

ಎಂಎಲ್ಸಿ ಇಟಗಿ ಅನುದಾನದಲ್ಲಿ ಆಂಬ್ಯುಲೆನ್ಸ್‌ ವಿತರಣೆ

03:40 PM Jan 03, 2022 | Team Udayavani |

ಸಿರವಾರ: ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ್‌ ಇಟಗಿ ಅವರ 25 ಲಕ್ಷ ರೂ. ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್‌ ಹಸ್ತಾಂತರ ಮಾಡಲಾಯಿತು.

Advertisement

ಈ ವೇಳೆ ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌ ಭೋಸರಾಜ ಮಾತನಾಡಿ, ಎಂಎಲ್‌ಸಿ ಇಟಗಿಯವರು ಬಡವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯಬೇಕು ಎಂಬ ದೃಷ್ಟಿಯಿಂದ ತಮ್ಮ ವಿಶೇಷ ಅನುದಾನಲ್ಲಿ ದೇವದುರ್ಗ ಹಾಗೂ ಸಿರವಾರ ತಾಲೂಕಿಗೆ ಆಂಬ್ಯುಲೆನ್ಸ್‌ ವಿತರಣೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾನ್ವಿಯಲ್ಲಿ ತಾಯಿ ಮಗು ಆಸ್ಪತ್ರೆ ಹಾಗೂ ಸಿರವಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಹಾಲಿ ಶಾಸಕರು ಆರೋಗ್ಯ ಕೇಂದ್ರಕ್ಕೆ ಸಲಕರಣೆ ಹಾಗೂ ವೈದ್ಯರನ್ನು ನೇಮಕ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ್‌ ಇಟಗಿ, ಡಾ| ಸುನೀಲ್‌ ಸರೋದೆ, ಡಾ| ಪರಿಮಳಾ ಮೈತ್ರಿ, ಮಾಜಿ ಶಾಸಕ ಜಿ. ಹಂಪಯ್ಯನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಶರಣಯ್ಯ ನಾಯಕ ಗುಡದಿನ್ನಿ, ರಮೇಶ ದರ್ಶನಕರ್‌, ತಾಪಂ ಮಾಜಿ ಅಧ್ಯಕ್ಷ ದಾನನಗೌಡ, ಚಂದ್ರು ಕಳಸ, ಶಿವಕುಮಾರ ಚುಕ್ಕಿ, ಕಿರಿಲಿಂಗಪ್ಪ ಕವಿತಾಳ, ಉಮಾಶಂಕರ, ಶಿವಶರಣ ಅರಕೇರಿ, ಶ್ರೀನಿವಾಸ ಜಾಲಾಪೂರು, ಸೂರಿ ದುರುಗಣ್ಣ ನಾಯಕ, ಹಸೇನ್‌ ಅಲಿ, ಹಾಜಿಚೌದ್ರಿ, ಮೌಲಾಸಾಬ ವರ್ಚಸ್‌, ಬಸವರಾಜ ಗಡ್ಲ, ಎಚ್‌.ಕೆ. ಅಮರೇಶ, ಎನ್‌.ಚಂದ್ರಶೇಖರ, ನಾಗಪ್ಪ ಪತ್ತಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next