Advertisement

ಅಂಬಿಕಾಪತಿ ಸಾವಿಗೆ ಶಾಸಕರ ಕಿರುಕುಳ ಕಾರಣ: ಕೆಂಪಣ್ಣ

11:57 PM Nov 28, 2023 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರದ್ದು ಸಹಜ ಸಾವಲ್ಲ. ಮಾಜಿ ಸಚಿವರೂ ಹಾಗೂ ಹಾಲಿ ಶಾಸಕರ ಟಾರ್ಚರ್‌ನಿಂದ ನೊಂದು ಹೃದಯಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ದೂರಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ.

Advertisement

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ಅಂಬಿಕಾಪತಿ ನನ್ನ ಒಡನಾಡಿಯಾಗಿದ್ದರು. ನನ್ನೊಂದಿಗೆ ಎಲ್ಲ ವಿಷಯಗಳನ್ನೂ ಹೇಳಿಕೊಳ್ಳುತ್ತಿದ್ದರು. ಎಂದಿಗೂ ಕೆಟ್ಟ ಹೆಸರು ಪಡೆದಿರದ ನಾನು, ಕೊನೆಗಾಲದಲ್ಲಿ ಕೆಟ್ಟ ಹೆಸರು ಪಡೆದೆನಲ್ಲ ಎಂದು ನೊಂದುಕೊಳ್ಳುತ್ತಿದ್ದರು. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಆದರೂ ನನ್ನನ್ನು ಅಪರಾಧಿ ಮಾಡಿದರಲ್ಲ ಎಂಬ ಕೊರಗು ಅವರಲ್ಲಿತ್ತು. ಆತ್ಮೀಯರಾಗಿದ್ದ ಹಿನ್ನೆಲೆಯಲ್ಲಿ ಹಲವು ವಿಚಾರಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಮಾಜಿ ಸಚಿವರು ಹಾಗೂ ಹಾಲಿ ಶಾಸಕರೂ ಆಗಿರುವ ಒಬ್ಬರು ಅಂಬಿಕಾಪತಿಗೆ ತೀವ್ರವಾಗಿ ಕಿರುಕುಳ ಕೊಟ್ಟಿದ್ದಾರೆ. ಆದ್ದರಿಂದಲೇ ಅವರು ನೊಂದು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಅಂಬಿಕಾಪತಿ ಅವರ ಮೇಲೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಡಿ. ಕೆಂಪಣ್ಣ ಆರೋಪ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next