Advertisement

ತೀರ್ಥಹಳ್ಳಿ : ಹೊದಲಾ ಅರಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಂಬಿಕಾ ಅವಿರೋಧ ಆಯ್ಕೆ

07:30 PM May 18, 2022 | Suhan S |

ತೀರ್ಥಹಳ್ಳಿ :  ಹೊದಲಾ ಅರಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಂಬಿಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಈ ಹಿಂದೆ  ಹೊದಲಾ ಅರಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕವಿತಾ ರಾಘವೇಂದ್ರರವರು ಉತ್ತಮ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಅವಧಿಯ ಮುಂಚಿತವಾಗಿ ತಮ್ಮ ಅಧ್ಯಕ್ಷಗಿರಿಯನ್ನು ಬಿಟ್ಟುಕೊಟ್ಟು ಅವಿರೋಧ ಆಯ್ಕೆಗೆ ಕಾರಣಕರ್ತರಾಗಿದ್ದರು. ಹಿಂದಿನ ಅವಧಿಯ ಉಪಾಧ್ಯಕ್ಷರಾಗಿದ್ಧ ಚಿಟ್ಟೆಬೈಲಿನ ಅನಿತಾ ಶ್ರೀಧರ್  ಇವರು ತಮ್ಮ ಸ್ಥಾನದಲ್ಲಿಯೇ  ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರರವರ ಆಪ್ತಕಾರ್ಯದರ್ಶಿ ಹೊದಲ ಬಸವರಾಜ್ ಕಳೆದ 11 ವರ್ಷಗಳಲ್ಲಿ ಹೊದಲ ಗ್ರಾಮಪಂಚಾಯಿತಿಯಲ್ಲಿ ಯಾವುದೇ ಸಂಘರ್ಷವಿಲ್ಲದೆ ಅಧಿಕಾರ ಹಸ್ತಾಂತರವಾಗುತ್ತಿದೆ. ಗ್ರಾಮಪಂಚಾಯಿತಿಯಲ್ಲಿ ಪಾರದರ್ಶಕ ಆಡಳಿತ ನೆಡೆಸುತ್ತಿದ್ದಾರೆ.

ಹಿಂದೆ ಆರಗ ಜ್ಞಾನೇಂದ್ರ ಶಿಮುಲ್ ಅಧ್ಯಕ್ಷರಾಗಿದ್ದಾಗ ನಷ್ಟದಲ್ಲಿದ್ದ ಶಿಮುಲ್ ಸಂಸ್ಥೆಯನ್ನು ಲಾಭಂಶದತ್ತ ತಂದು ಉತ್ತಮ ಆಡಳಿತ ನೆಡೆಸಿದ್ದರು. ಅಂದು ಕೂಡ ಒಳ ಒಪ್ಪಂದ ಇತ್ತು. ಅವರು ಒಂದೇ ಪಕ್ಷದ ಸಂಘಟನೆಯ ಅಧ್ಯಕ್ಷರಾಗಿರಲಿಲ್ಲ. ಆರಗ ಜ್ಞಾನೇಂದ್ರ ಅವಧಿ ಮುಕ್ತಾಯದ ಸಮಯ ಹತ್ತಿರ ಬರುತ್ತಿದ್ದಂತೆ  ಶಿಮುಲ್ ನ ಎಲ್ಲಾ ಸದಸ್ಯರು ಒಟ್ಟಾಗಿ ಆರಗ ಜ್ಞಾನೇಂದ್ರ ಅವರ ರಾಜೀನಾಮೆ ವಿರೋಧಿಸಿ ನೀವೇ ಮುಂದುವರೆಯಿರಿ ಎಂದು ಹೇಳಿದರಾದರೂ ಅದಕ್ಕೆ ಆರಗ ಜ್ಞಾನೇಂದ್ರ ನಾನು ಒಪ್ಪಂದದಂತೆ ಮಾತಿಗೆ ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಈ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿ ತಮ್ಮ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.  ಆ ಅಡಿಪಾಯವೇ ಹೊದಲ ಅರಳಾಪುರ ಗ್ರಾಮಪಂಚಾಯಿತಿಯಲ್ಲಿ ಅವಿರೋಧ ಆಯ್ಕೆಗೆ ಕಾರಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರುಗಳಾದ ಹೊದಲ ದಿನೇಶ, ಉಪಾಧ್ಯಕ್ಷೆ ಅನಿತಾ ಶ್ರೀಧರ,  ಮಾಜಿ ಅಧ್ಯಕ್ಷೆ ಕವಿತಾ ರಾಘವೇಂದ್ರ,  ಮಾಜಿ ಉಪಾಧ್ಯಕ್ಷರುಗಳಾದ ಚಂದ್ರಶೇಖರ ಹೆಗ್ಡೆ, ವಿಶ್ವನಾಥ ಪ್ರಭು, ಮಾಜಿ ತಾ.ಪಂ ಸದಸ್ಯ ಕುಕ್ಕೆ ಪ್ರಶಾಂತ್,  ಚುನಾವಣಾಧಿಕಾರಿ ಮಾಲತೇಶ್  ಯುವ ಮುಖಂಡರುಗಳಾದ ತಲವಡಗ ಗಂಗಾಧರ, ರಾಜಶೇಖರ ಭಟ್ ಹೊದಲ ಸಂತೋಷ ಕಣಬೂರು ರಾಘವೇಂದ್ರ ಮಾಜಿ ಸದಸ್ಯ ಆನಂತ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next