Advertisement

ಅಂಬಿ ಯಾವತ್ತೂ ಅಭಿಮಾನಿಗಳ ಮನಸ್ಸಲ್ಲೇ ಇರುತ್ತಾರೆ: ಸುಮಲತಾ

04:29 AM May 30, 2020 | Lakshmi GovindaRaj |

ನಟ ಅಂಬರೀಶ್‌ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‌ ಸಮಾಧಿ ಬಳಿ ಹೂವಿನ ಅಲಂಕಾರ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಈ ವೇಳೆ ಅಂಬರೀಶ್‌ ಪತ್ನಿ  ಸುಮಾಲತಾ, ಮಗ ಅಭಿಷೇಕ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಚಿವ ಗೋಪಾಲಯ್ಯ, ನಟ ದೊಡ್ಡಣ್ಣ ಸೇರಿ ಕುಟುಂಬದ ಅಪ್ತರು, ಅಭಿಮಾನಿಗಳು ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು.

Advertisement

ಲಾಕ್‌ ಡೌನ್‌ ಆಗಿರುವುದರಿಂದ ಸಮಾಧಿ ಬಳಿ ತೆರಳಲು   ಅಭಿಮಾನಿಗಳಿಗೆ ಅವಕಾಶವಿರಲಿಲ್ಲ. ಸಮಾಧಿ ಬಳಿ ಮಾತನಾಡಿದ ಸುಮಲತಾ ಅಂಬರೀಶ್‌, ಪ್ರತಿವರ್ಷನೂ ನಮ್ಮ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕುತ್ತಿದ್ದರು. ಕೇಕ್‌, ಹೂವಿನ ಹಾರ ತಂದು  ಸಂಭ್ರಮಿಸುತ್ತಿದ್ದರು. ಆದರೆ ಈಗ ಅದೆಲ್ಲಾ ಮನಸ್ಸಿನಲ್ಲಿದೆ. ಈ ವರ್ಷ ಅಭಿಮಾನಿಗಳು ಬರಲು ಸಾಧ್ಯವಾಗಿಲ್ಲ.

ಆದರೆ ಅಭಿಮಾನಿಗಳು ಯಾವತ್ತೂ ನಮ್ಮ ಮನಸ್ಸಿನಲ್ಲಿಯೇ ಇರುತ್ತಾರೆ ಎಂದು ದಿವಂಗತ ಅಂಬರೀಶ್‌ ಪತ್ನಿ ಸುಮಲತಾ  ಹೇಳಿದರು. ಬಳಿಕ ಮಾತನಾಡಿದ ಅವರು, ಅಭಿಮಾನಿಗಳು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ನಿನ್ನೆಯಿಂದಲೇ ಸಾವಿರಾರು ಜನರು ಸೋಶಿಯಲ್‌ ಮೀಡಿಯಾ ಫೋನ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಆದ್ದರಿಂದ ಅಭಿಮಾನ ಎನ್ನುವುದು ಎಲ್ಲೂ ಹೋಗಿಲ್ಲ. ಈ ವರ್ಷ ಅಭಿಮಾನಿ ಗಳು ಇಂತಹ ಪರಿಸ್ಥಿತಿ ಯಲ್ಲಿ ಬರಲು ಸಾಧ್ಯ ವಾಗಿಲ್ಲ ಎಂದರು.

ಅಭಿಷೇಕ್‌ ಸಿನಿಮಾದ ಫ‌ಸ್ಟ್‌ ಲುಕ್‌ ರಿಲೀಸ್‌: ಸುಮಲತಾ ಅವರು ಮಗ ಅಭಿಷೇಕ್‌ ಅಭಿನಯದ ಬ್ಯಾಡ್‌ ಮ್ಯಾನರ್ಸ್‌ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ. ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಜನ್ಮ ಜಯಂತಿಯ ಪ್ರಯುಕ್ತ ಯಂಗ್‌  ಅಭಿಷೇಕ್‌ ಅಂಬರೀಷ್‌ ಅಭಿನಯದ ಸಿನಿಮಾದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಪೋಸ್ಟರಿನಲ್ಲಿ ಅಭಿಷೇಕ್‌ ಗನ್‌ ಹಿಡಿದುಕೊಂಡು ಸೈಲಿಶ್‌ ಆಗಿ ಖದರ್‌ ಪೋಸ್‌ ಕೊಟ್ಟಿದ್ದಾರೆ.

Advertisement

ಈ ಚಿತ್ರವನ್ನು ದುನಿಯಾ ಸೂರಿ  ನಿರ್ದೇಶನ ಮಾಡುತ್ತಿದ್ದು, ಸುಧೀರ್‌ ಕೆ.ಎಂ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಫ‌ಸ್ಟ್‌ಲುಕ್‌ ವಿಡಿಯೋ ರಿಲೀಸ್‌ ಆಗಿದೆ. ಬಳಿಕ ಮಾತನಾಡಿದ ಸುಮಲತಾ, ಅಂಬಿ ಹುಟ್ಟುಹಬ್ಬದ ದಿನವೇ ಅಭಿಷೇಕ್‌ 2ನೇ ಸಿನಿಮಾ ಫ‌ಸ್ಟ್‌ ಲುಕ್‌ ಲಾಂಚ್‌ ಆಗಿದ್ದು  ಸಂತೋಷವಾಗುತ್ತಿದೆ. ಒಂದು ವರ್ಷದಿಂದ ಅವರ ಸಿನಿಮಾದ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದರು. ಮೊದಲ ಚಿತ್ರ ಪ್ರೇಮಕಥೆ ಆಗಿತ್ತು.

ಹೀಗಾಗಿ ಬೇರೆ ರೀತಿಯ ಪಾತ್ರ ಮಾಡುವಂತಹ ಕಥೆಯನ್ನ ಹುಡುಕುತ್ತಿದ್ದೆವು. ಈ ಬಾರಿ ಸೂರಿ  ನಿರ್ದೇಶನ ಮಾಡುತ್ತಿದ್ದಾರೆ. ಸೂರಿ ಅವರು ತುಂಬಾ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಹೀಗಾಗಿ ಎರಡನೇ ಸಿನಿಮಾ ಸೂರಿ ಜೊತೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಮೇಲೆ  ಭಾರೀ ನಿರೀಕ್ಷೆ ಇದೆ ಎಂದು ಮಗನ ಚಿತ್ರದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next