Advertisement

ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರ ಮುಖ್ಯ

05:18 PM Dec 07, 2018 | Team Udayavani |

ಹುಣಸಗಿ: ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್‌ ಅವರ ಪಾತ್ರ ಮುಖ್ಯವಾಗಿದ್ದು, ದೇಶದ ಸಲುವಾಗಿ ದುಡಿದವರಲ್ಲಿ ಪ್ರಮುಖರು ಎಂದು ಮಲ್ಲಣ್ಣ ಕಟ್ಟಿಮನಿ ಹೇಳಿದರು. ಪಟ್ಟಣದಲ್ಲಿನ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಗುರುವಾರ ದಲಿತಪರ ಸಂಘಟನೆಗಳಿಂದ ಸಂವಿಧಾನ ಶಿಲ್ಪಿ
ಡಾ| ಅಂಬೇಡ್ಕರ್‌ ಅವರ 61ನೇ ಮಹಾ ಪರಿನಿರ್ವಾಣ ದಿನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ತಮ್ಮ ಜೀವನದಲ್ಲಿ ಹಲವು ಕಷ್ಟ ಸವಾಲುಗಳನ್ನು ಅನುಭವಿಸಿ, ಆಕಾಶದ ಎತ್ತರಕ್ಕೆ ಬೆಳೆದವರು ಎಂದು ಗುಣಗಾನ ಮಾಡಿದರು. ಅನೇಕ ಶತಮಾನಗಳಿಂದಲೂ ತುಳಿಕ್ಕೊಳಗಾದವರಿಗೆ ಸಂವಿಧಾನ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ
ಮಹಾನ್‌ ಮಾನವತಾವಾದಿ ಎಂದು ಹೇಳಿದರು. ಸಮಾಜದಲ್ಲಿ ಎಷ್ಟೇ ಕಷ್ಟ ಅನುಭವಿಸಿದರೂ ಎಂದಿಗೂ ಯಾರನ್ನು ದೂಷಿಸದೇ ತಮ್ಮದೇ ಧೇಯದೊಂದಿಗೆ ಮುನ್ನಡೆದು ಸಮಾಜ ಸುಧಾರಣೆಗೆ ಮುಂದಾದವರು ಎಂದು ತಿಳಿಸಿದರು. ಮುಖಂಡರಾದ ಮರಿಲಿಂಗಪ್ಪ ನಾಟೇಕಾರ,
ನಿವೃತ್ತ ಶಿಕ್ಷಕ ಶರಣಪ್ಪ ಗುಳಬಾಳ, ಕನಕಪ್ಪ ಸಿದ್ದಾಪುರ, ಬಸಲಿಂಗಪ್ಪ ಚಲವಾದಿ, ನಿಂಗಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ನಾಟೇಕಾರ, ಮಾನಯ್ಯ ಗುತ್ತೇದಾರ, ವೀರೇಶ ಗುಳಬಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next