ಸೇಡಂ: ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ ಅಂಬೇಡ್ಕರ್ ಕಟ್ಟಿಕೊಂಡಿದ್ದ ಶೋಷಿತ ಸಮುದಾಯದ ಏಳ್ಗೆಯ ಕನಸು ನನಸು ಮಾಡುವ ನಿಟ್ಟಿನಲ್ಲಿ ನೀವೆಲ್ಲರೂ ಸಂಕಲ್ಪ ಮಾಡುವುದು ಅವಶ್ಯವಾಗಿದೆ ಎಂದು ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಹೇಳಿದರು.
ಕಲಬುರಗಿ ರಸ್ತೆಯಲ್ಲಿನ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಡಾ| ಬಿ.ಆರ್. ಅಂಬೇಡ್ಕರ ಜ್ಞಾನ ದರ್ಶನ ಅಭಿಯಾನ ಕಲಬುರಗಿ ಜಂಟಿಯಾಗಿ ಆಯೋಜಿಸಿದ್ದ 125ನೇ ಜಯಂತಿ ಅಂಗವಾಗಿ ಜ್ಞಾನ ದರ್ಶನ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ಎಸ್ಸಿ, ಎಸ್ಟಿ ಯುವಕರು ನಿರುದ್ಯೋಗಿಯಾಗಿರುವುದು ವಿಷಾಧದ ಸಂಗತಿಯಾಗಿದೆ. ಸರ್ಕಾರ ಶೋಷಿತ ಸಮುದಾಯದ ಉದ್ಧಾರಕ್ಕಾಗಿ ಶಿಕ್ಷಣ ಸೇರಿದಂತೆ ಅನೇಕ ರಂಗದಲ್ಲಿ ವಿವಿಧ ಸವಲತ್ತುಗಳನ್ನು ನೀಡುತ್ತಿದೆ. ಅದರ ಲಾಭ ಪಡೆದುಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದರು.
ಅಭಿಯಾನದ ಪ್ರಮುಖ ಭೀಮಣ್ಣಗೌಡ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣು ಮಹಾಗಾಂವ ಮಾತನಾಡಿದರು. ಉಪನ್ಯಾಸಕ ಸುಭಾಷ ಶಿಲವಂತ ವಿಶೇಷ ಉಪನ್ಯಾಸ ನೀಡಿದರು. ಜ್ಞಾನ ದರ್ಶನ ಅಭಿಯಾನದ ಜಿಲ್ಲಾ ಸಂಚಾಲಕ ನಾಗರಾಜ ವಾಡೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕಾಂತ ನಂದೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ, ಅವಿನಾಶ ಬೋರಂಚಿ ಇದ್ದರು. ವಸತಿ ನಿಲಯದ ಮೇಲ್ವಿಚಾರಕ ರಾಜಶೇಖರ ರುದೂ°ರ ಅಧ್ಯಕ್ಷತೆ ವಹಿಸಿದ್ದರು. ಸಂಪತ್ತಿ ಪ್ರಾರ್ಥಿಸಿದರು. ರೂಪ್ಲಾನಾಯಕ ನಿರೂಪಿಸಿದರು. ರಾಹುಲ ಮೌರ್ಯ ವಂದಿಸಿದರು.