ಮಹಾನಗರ: ಕುದುರೆಮುಖ ಪ.ಜಾತಿ/ಪ.ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಮತ್ತು ಕುದುರೆಮುಖ ಕ್ರೀಡಾ ಮತ್ತು ಮನೋರಂಜನ ಸಮಿತಿಯ ಸಹಯೋಗದೊಂದಿಗೆ ಕಾವೂರು ಕೆಐಒಸಿಎಲ್ ಟೌನ್‌ಶಿಪ್‌ನಲ್ಲಿ ಸಂವಿಧಾನ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನವನ್ನು ಆಚರಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯ ಎಂ.ಎಸ್. ಡಬ್ಲ್ಯು ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮೋಹನ್. ಎಸ್. ಸಿಂN ಮಾತನಾಡಿ, ಮುಂದು ವರಿದ ದೇಶಗಳು ಅಂಬೇಡ್ಕರ್‌ಗೆ ವಿಶ್ವ ಮಾನವ ಸ್ಥಾನ ನೀಡಿದ್ದರೂ ಮಹಾನ್ ಚಿಂತಕ, ಪರಿವರ್ತಕ ಅಂಬೇಡ್ಕರ್ ಕೇವಲ ದಮನಿತ ವರ್ಗದ ಏಳಿಗೆ ಗಾಗಿ ದುಡಿದಿದ್ದಾರೆಂಬ ತಪ್ಪುಕಲ್ಪನೆ, ಕೆಳ ಜಾತಿಯ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ವಿಚಾರ ಧಾರೆಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆದು ಭಾರತದಲ್ಲಿ ವಿಶ್ವ ಮಾನವ ಸ್ಥಾನದಿಂದ ವಂಚಿತ ರಾಗಿದ್ದರು ಎಂದರು.
ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಜನರಲ್ ಮ್ಯಾನೇಜರ್ ಎ.ವಿ. ಶ್ರೀನಿವಾಸ ಭಟ್, ಬ್ಲಾಸ್ಟ್ ಫರ್ನೆಸ್ ಯುನಿಟ್ ಜಾಯಿಂಟ್ ಜನರಲ್ ಮ್ಯಾನೇ ಜರ್ ಟಿ. ಗಜಾನನ ಪೈ, ಪ್ರೋಸೆಸ್ ಟೆಕ್ನಾಲಜಿ ಜನರಲ್ ಮ್ಯಾನೇಜರ್ ಬಿ.ವಿ. ಪ್ರಕಾಶ್, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮ್ಯಾನೇ ಜರ್ ಎಸ್. ಮುರುಗೇಶ್, ವಿಚಕ್ಷಣಾಧಿಕಾರಿ ಎಚ್.ಎಸ್. ಪುಟ್ಟರಾಜು ಪುಷ್ಪ ನಮನ ಸಲ್ಲಿಸಿದರು. ಆವರಣ ದಲ್ಲಿರುವ ನೆಹರೂ ಪ್ರತಿಮೆಗೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಂಘದ ಅಧ್ಯಕ್ಷ ಶಂಕರಪ್ಪ, ಸಂಘಟನ ಕಾರ್ಯ ದರ್ಶಿ ನಾರಾಯಣ ಡಿ., ಖಜಾಂಚಿ ದೇವಣ್ಣ ನಾಯಕ್, ಕಾರ್ಯದರ್ಶಿ ಆರ್. ಶೇಖರಪ್ಪ, ಶಾಖಾ ಖಜಾಂಚಿ ಜಗ್ಗು ರಾಥೋಡ್, ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರಾದ ಕೆ. ಬಾಬು, ಅರ್ಜುನ್, ಎ.ಪಿ. ಸಾಳೆ, ರಘುನಾಥ ನಾಯಕ್, ನಾರಾಯಣಸ್ವಾಮಿ ವಿ., ಆಫೀಸರ್ ಅಸೋಸಿಯೇಶನ್, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಬೌದ್ಧ ದಮ್ಮಾಚಾರಿ ಎಸ್.ಆರ್. ಲಕ್ಷ್ಮಣ್ ಸ್ವಾಗತಿಸಿ, ನಿರೂಪಿಸಿದರು. ಶೇಖರಪ್ಪ ಆರ್. ವಂದಿಸಿದರು. ಎಸ್.ಆರ್. ಲಕ್ಷ್ಮಣ್ ತಂಡದ ಮಕ್ಕಳು ಬುದ್ಧ ಗೀತೆಯನ್ನು ಹಾಡಿದರು.
ಸ್ತ್ರೀಯರಿಗೂ ಸಮಾನ ಅವಕಾಶ
ಸಂಸ್ಥೆಯ ಡೈರೆಕ್ಟರ್ (ಪ್ರೊಡಕ್ಷನ್ ಮತ್ತು ಯೋಜನೆ) ಎನ್. ವಿದ್ಯಾನಂದ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿ, ಇತರೆ ದೇಶಗಳಿಗಿಂತಲೂ ಭಾರತದ ಆಚಾರ, ವಿಚಾರ, ಕಟ್ಟುಪಾಡುಗಳು ವಿಭಿನ್ನವಾದ್ದರೂ ಅಂಬೇಡ್ಕರ್ ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ತನ್ನ ಅಧ್ಯಯನದಿಂದ ಭಾರತ ದೇಶಕ್ಕೆ ಉನ್ನತವಾದ ಸಂವಿಧಾನವನ್ನು ರಚಿಸಿಕೊಟ್ಟಿರುವುದು ಶ್ಲಾಘನೀಯ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೂ ಸಮಾನ ಅವಕಾಶ ನೀಡಲು ಶ್ರಮಿಸಿದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ ಎಂದರು.