ಬೆಂಗಳೂರು: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು 2017-18ನೇ ಶೈಕ್ಷಣಿಕ ವರ್ಷದಿಂದ ಸರ್ಕಾರ ಆರಂಭಿಸಲಿದೆ.ಇದರ ರಚನೆ ಮತ್ತು ವಿನ್ಯಾಸಕ್ಕೆ ಪೂರಕವಾದ ಸೌಕರ್ಯ ಒದಗಿಸಲು ಒಂದನೇ ಹಂತದಲ್ಲಿ 150 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ.
ಬೆಂವಿವಿ ಕ್ಯಾಂಪಸ್‌ನಲ್ಲಿ ಆರಂಭವಾದರೂ, ಸ್ವಾಯತ್ತ ಸಂಸ್ಥೆಯಾಗಿ ಅದು ಅಭಿವೃದಿಟಛಿ ಹೊಂದಲಿದೆ. ಅಂಬೇಡ್ಕರ್ ಅರ್ಥ ಶಾಲೆಯ ಪಠ್ಯಕ್ರಮ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ (ಇನ್‌ಟೇಕ್) ಎಷ್ಟಿರಬೇಕು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಪಠ್ಯಕ್ರಮ ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಲಾಗುತ್ತದೆ.
ಅಂಬೇಡ್ಕರ್ ಆರ್ಥ ಶಾಲೆಯ ಸದ್ಯದ ವ್ಯವಸ್ಥೆ ಹಾಗೂ ಆಡಳಿತಾತ್ಮಕ ಕಾರ್ಯಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಆರ್ಥಿಕ ತಜ್ಞ ಡಾ.ಅನೂಪ್ ಕೆ.ಪೂಜಾರಿ ಅವರನ್ನು ವಿಶೇಷಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ಡಾ.ಅನೂಪ್ ಕೆ.ಪೂಜಾರಿಯವರು ಅರ್ಥಶಾಸOಉದಲ್ಲಿ ಪಿಎಚ್.ಡಿ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಅಧ್ಯಯನ ವಿಷಯಗಳು: ಸಾರ್ವಜನಿಕ ನೀತಿಯ ಬಗ್ಗೆ ವಿಶೇಷ ಸಂಶೋಧನೆ ಈ ಶಾಲೆ ಮೂಲಕ ನಡೆಯಲಿದೆ. ರಾಜ್ಯದ ಆರ್ಥಿಕತೆ ಮತ್ತು ಸಾಮಾಜಿಕ ವಿಷಯಕ್ಕೆ ಭವಿಷ್ಯದಲ್ಲಿ ಅನುಕೂಲವಾಗುವ ಮಾದರಿಯಲ್ಲಿ ಉನ್ನತ ಸಂಶೋಧನೆಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಸಾರ್ವಜನಿಕ ನೀತಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಇತರೆ ಸಂಸ್ಥೆ ಹಾಗೂ ಏಜೆಸ್ಸಿ ಪ್ರತಿನಿಧಿಗೂ ಇಲ್ಲಿ ಅವಕಾಶವಿದೆ. ಆಧುನಿಕ ಸಾಮಾಜಿಕ ವಿಜ್ಞಾನದ ನೆಲೆಗಟ್ಟಿನಲ್ಲಿ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ಸಂಸ್ಥೆ ಇದಾಗಲಿದೆ. ಸ್ಥಳೀಯ ಪ್ರತಿನಿಧಿಗಳಿಗೂ ಆದ್ಯತೆ ಸಿಗಲಿದೆ ಎಂದು ಬೆಂಗಳೂರು ವಿವಿ ಕುಲಸಚಿವ ಡಾ.ನಿಂಗೇಗೌಡ ಮಾಹಿತಿ ನೀಡಿದರು
ಏ.14ಕ್ಕೆ ರಾಷ್ಟ್ರಪತಿಗಳಿಂದ ಶಿಲಾನ್ಯಾಸ
ಡಾ.ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏ.14ರಂದು ಬೆಂಗಳೂರಿನ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಒಟ್ಟು ದಾಖಲಾತಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಸೇರಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಶೇ.30ರಷ್ಟು ಸೀಟು ಮೀಸಲಾತಿ ಕಲ್ಪಿಸಲಾಗುತ್ತದೆ.