Advertisement

ಗಣರಾಜ್ಯೋತ್ಸವದಲ್ಲಿ ಡಾ|ಅಂಬೇಡ್ಕರ್ ಫೋಟೋ ತೆಗೆಸಿದ ಪ್ರಕರಣ: ರಸ್ತೆ ತಡೆದು ಪ್ರತಿಭಟನೆ

03:09 PM Jan 27, 2022 | Team Udayavani |

ಗಂಗಾವತಿ: ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಡಾ|ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ಪ್ರಕರಣಕ್ಕೆ ಕಾರಣರಾದ ನ್ಯಾಯಾಧೀಶರ ಮೇಲೆ ಕೂಡಲೇ ಹೈಕೋರ್ಟ್ ಹಾಗೂ ರಾಜ್ಯ ಸರಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ದಲಿತಪರ ಸಂಘಟನೆಗಳ ಒಕ್ಕೂಟ, ಸಿಪಿಐಎಂಎಲ್ ಪ್ರಗತಿಪರ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಡಾ|ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಿ ರಾಜ್ಯಪಾಲರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು ಹಾಗೂ ವಿಪಕ್ಷ ನಾಯಕರಿಗೆ ತಹಸೀಲ್ದಾರ್ ಮೂಲಕ ಗುರುವಾರ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ದಲಿತಪರ ಸಂಘಟನೆಗಳ ಹಿರಿಯ ಮುಖಂಡ ಕುಂಟೋಜಿ ಮರಿಯಪ್ಪ, ಜೆ.ಭಾರದ್ವಾಜ್ ಹಾಗೂ ನ್ಯಾಯವಾದಿ ಹುಸೇನಪ್ಪ ಹಂಚಿನಾಳ ಮಾತನಾಡಿ, ಡಾ|ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನವನ್ನು ಓದಿ ನ್ಯಾಯಾಧೀಶರಾದವರು, ಅಂಬೇಡ್ಕರ್ ಫೋಟೋ ಇದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲ ಎಂದು ಸಾರ್ವಜನಿಕರ ಎದುರು ಮಾತನಾಡಿದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದರು.

1950 ರಿಂದಲೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರವಿಟ್ಟು ಆಚರಣೆ ಮಾಡಲಾಗುತ್ತದೆ. ಇಂತಹ ಕೃತ್ಯವೆಸಗಿದ ನ್ಯಾಯಾಧೀಶರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದ್ದಾರೆ. ಕೂಡಲೇ ಹುದ್ದೆಯಿಂದ ತೆಗೆದು ಹಾಕಿ ಗಡಿಪಾರು ಮಾಡಬೇಕು. ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಂವಿಧಾನ ವಿರೋಧಿ ಚರ್ಚಾಸ್ಪರ್ಧೆ ಮಾಡಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅವಧಿ ಮುಗಿದಿದೆ ಎಂಬ ಅರ್ಥದಲ್ಲಿ ವಿಷಯ ಮಂಡನೆ ಮಾಡಿರುವುದು ಖಂಡನೀಯವಾಗಿದೆ ಎಂದರು.

ಗಂಗಾವತಿಯ ಜುಲೈ ನಗರದಲ್ಲಿಯೂ ಕೆಲ ಸಂಘಟನೆಗಳ ಮುಖಂಡರು ಡಾ|ಅಂಬೇಡ್ಕರ್ ಪೋಟೋ ಇಲ್ಲದೇ ಗಣರಾಜ್ಯೋತ್ಸವ ಮಾಡಿದ್ದು ಖಂಡನೀಯವಾಗಿದೆ. ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next