Advertisement

ಅಂಬೇಡ್ಕರ್ ಎಂದರೆ ಹೋರಾಟ, ಹೋರಾಟ ಎಂದರೆ ಅಂಬೇಡ್ಕರ್: ಎನ್.ಆರ್.ಕಾಂತರಾಜ್

08:13 PM Apr 29, 2022 | Team Udayavani |

ಪಿರಿಯಾಪಟ್ಟಣ: ಜಗತ್ತಿನಲ್ಲಿ ಮೊಟ್ಟಮದಲ ಬಾರಿಗಿ ಮಹಿಳಾ ಮೀಸಲಾತಿಗಾಗಿ ತಮ್ಮ ಸಚಿವ ಸ್ಥಾನ ತೆಜಿಸಿ ಸಂಪುಟದಿಂದ ಹೊರ ನಡೆದ ಮಹಾನ್ ನಾಯಕ ಎಂದರೆ ಅದು ಡಾ.ಅಂಬೇಡ್ಕರ್ ಮಾತ್ರ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್.ಕಾಂತರಾಜ್ ಬಣ್ಣಿಸಿದರು.

Advertisement

ಪಟ್ಟಣದ ಗೋಣಿಕೊಪ್ಪರ ರಸ್ತೆಯ ರಾಂಪುರ ಬಡಾವಣೆಯ ಸಮುದಾಯ ಭವನದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಎಂದರೆ ಹೋರಾಟ, ಹೋರಾಟ ಎಂದರೆ ಅಂಬೇಡ್ಕರ್. ಇವರು ತಮ್ಮ ಬದುಕನ್ನು ಹೋರಾಟದಲ್ಲೇ ಕಳೆದು ಭಾರತದಲ್ಲಿ ಸಮಾನತೆ ನೆಲೆಸಲು ಕಾರಣೀಭೂತರಾಗಿದ್ದಾರೆ. ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಬೇಡ್ಕರ್ ಮಾತ್ರ. ಒಂದು ವೇಳೆ ಅಂಬೇಡ್ಕರ್ ಜನ್ಮ ತಾಳದಿದ್ದರೇ ಶೋಷಿತ ಸಮುದಾಯಗಳಿಗೆ ಸಮಾನತೆ ಎಂಬುದು ಮರಿಚಿಕೆಯಾಗಿರುತ್ತಿತ್ತು. ಪತ್ರಿಕೆಗಳೆಂದರೆ ಅಂಬೇಡ್ಕರ್ ರವರಿಗೆ ಎಲ್ಲಿದ ಪ್ರೀತಿ. ಶೋಷಿತ ಸಮುದಾಯದ ಜನರಿಗೆ ಶಿಕ್ಷಣವೆಂಬುದು ಮರಿಚಿಕೆಯಾಗಿದ್ದ ಆ ಕಾಲದಲ್ಲೇ ಮೂಕ ನಾಯಕ ಮತ್ತು ಬಹಿಸ್ಕೃತ್ ಭಾರತ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಇವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಸಂವಿಧಾನ ರಚಿಸಿಲ್ಲ ದೇಶದ ಎಲ್ಲಾ ವರ್ಗದ ಜನರಿಗಾಗಿ ಸಂವಿಧಾನ ರಚಿಸಿದ್ದಾರೆ ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ವಯಸ್ಕ ಮತದಾನ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಇಂಗ್ಲಿಷ್ ಶಿಕ್ಷಣಕ್ಕಾಗಿ ಹೋರಾಟ ಸೇರಿದಂತೆ ಪ್ರಬುದ್ದ ಬಾರತದ ನಿರ್ಮಾಣಕ್ಕಾಗಿ ಹೋರಾಟ ಮಾಡಿದರು ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ. ಇಡಿ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ದೇಶದ ಸಂವಿಧಾನವನ್ನು ರಚಿಸಿದ ಮಹಾನ್ ನಾಯಕರ ಅಂಬೇಡ್ಕರ್ ಎಂದರು.

ಅಲ್ಪಸಂಖ್ಯಾತ ಮುಖಂಡ ವಾಜೀದ್ ಪಾಷ ಮಾತನಾಡಿ ಆಡುಮುಟ್ಟದ ಸೊಪ್ಪಿಲ್ಲ ಡಾ.ಅಂಬೇಡ್ಕರ್ ಸಾಧನೆ ಮಾಡದ ಕ್ಷೇತ್ರವಿಲ್ಲ, ಇವರೊಬ್ಬರ ಜಗತ್ತಿನ ಶ್ರೇಷ್ಠ ಚಿಂತಕ ಹಾಗೂ ಶಿಕ್ಷಣ ತಜ್ಞ, ಇವರಿಗಿರುವಷ್ಟು ಅಭಿಮಾನಿ ಸಂಘಗಳು ಮತ್ತು ಅಭಿಮಾನಿಗಳು ಯಾವ ರಾಷ್ಟ್ರೀಯ ನಾಯಕರಿಗೂ ಇಲ್ಲ ಇವರು ಸ್ವಹಿತಾಸಕ್ತಿಗೆ ಪ್ರಾಮುಖ್ಯತೆ ನೀಡದೆ, ತ್ಯಾಗಮಯಿಗಳಾಗುವ ಮೂಲಕ ಜನರಿಗಾಗಿ, ದೇಶಕ್ಕೆ ಅಪೂರ್ವ ಸೇವೆ ಸಲ್ಲಿಸಿದ ಮಹನೀಯರಾಗಿದ್ದು, ಅಂತಹ ಸಾಧಕರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಅಂಬೇಡ್ಕರ್ ರವರ ತತ್ವಾದರ್ಶಗಳನ್ನು, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ.ಎನ್.ದೇವೇಗೌಡ, ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಕಾಂತರಾಜು, ತಾಲ್ಲೂಕು ಅಧ್ಯಕ್ಷ ಜೆ.ಮಹದೇವ್, ಗೌರವಾಧ್ಯಕ್ಷರಾದ ರಮಣಯ್ಯ, ಹೊನ್ನೂರಯ್ಯ, ಕಾರ್ಯಧ್ಯಕ್ಷ ಸುಭಾಸ್, ಉಪಾಧ್ಯಕ್ಷ ದಾಸರಾಜು, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಸಂಚಾಲಕ ಗೊರಳ್ಳಿ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ, ಶಿಕ್ಷಕ ಅಣ್ಣಯ್ಯ ಸೇರಿದಂತೆ ದಸಂಸ ಮುಖಂಡರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next