Advertisement

ಅಂಬೇಡ್ಕರ್‌ ಮಹಾನ್‌ ಮಾನವತಾವಾದಿ: ಜಿಲ್ಲಾಧಿಕಾರಿ

08:27 PM Apr 14, 2019 | Sriram |

ಮಹಾನಗರ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಮಹಾನ್‌ ಮಾನವತಾವಾದಿಯಾಗಿದ್ದರು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವನ್ನು ನೀಡಿ ಸಮಸಮಾಜ ನಿರ್ಮಾಣಕ್ಕೆ ಕಾರಣಕರ್ತರಾದರು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎಸ್‌. ಶಶಿಕಾಂತ್‌ ಸೆಂಥಿಲ್‌ ಹೇಳಿದರು.

Advertisement

ನಗರದ ಪುರಭವನದ ಆವರಣದಲ್ಲಿ ರವಿವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ 128ನೇ ಅಂಬೇಡ್ಕರ್‌ ಜನ್ಮ ದಿನಾಚರಣೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿ ಅವರು ಮಾತನಾಡಿದರು.

ಎಲ್ಲ ವಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸಿ ದೇಶದ ಪ್ರಗತಿಗಾಗಿ ಶ್ರಮಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಕರ್ತವ್ಯ ಎಂಬುದನ್ನು ಆಚರಣೆಯ ಮೂಲಕ ಮಾಡಿ ತೋರಿಸಿದ ಮಹಾನ್‌ ಚೇತನ ಅಂಬೇಡ್ಕರ್‌. ನಾವಿಂದು ಆ ಮಹಾನ್‌ ಚೇತನ ನೀಡಿದ ಸಂವಿಧಾನದ ಸ್ಫೂರ್ತಿಯನ್ನು ಎತ್ತಿ ಹಿಡಿಯುವ ಮುಖಾಂತರ ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯನ್ನು ಆಚರಿಸಬೇಕು ಎಂದರು.

ಅಂಬೇಡ್ಕರ್‌ ಭಾರತದ ಭಾಗ್ಯ ವಿಧಾತ
ಪಶ್ಚಿಮವಲಯ ಐಜಿಪಿ ಅರುಣ್‌ ಚಕ್ರವರ್ತಿ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್‌ ಅವರು ಭಾರತದ ಭಾಗ್ಯ ವಿಧಾತ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗಲು ಮೂಲ ಕಾರಣ ಅಂಬೇಡ್ಕರ್‌. ನಮ್ಮ ದೇಶಕ್ಕೆ ನೀಡಿದ ಸಂವಿಧಾನ. ನಮ್ಮ ಸಂವಿಧಾನವೆ ನಮ್ಮೆಲ್ಲರನ್ನು ಒಗ್ಗೂಡಿಸಿಕೊಂಡು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಸೆಲ್ವಮಣಿ ಆರ್‌, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಲಕ್ಷಿ$¾àಪ್ರಸಾದ್‌, ಕಮಿಷನರ್‌ ಸಂದೀಪ್‌ ಪಾಟೇಲ್‌, ಡಿಸಿಪಿ ಹನುಮಂತರಾಯ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್‌ ಅಧೀಕ್ಷಕರಾದ ವೇದಮೂರ್ತಿ, ಮಹಾನಗರಪಾಲಿಕೆ ಆಯುಕ್ತರಾದ ಬಿ.ಎಚ್‌. ನಾರಾಯಣಪ್ಪ, ತಹಶೀಲ್ದಾರ್‌ ಗುರುಪ್ರಸಾದ್‌, ಎಸಿಪಿ ಸುಧೀರ್‌ ಹೆಗ್ಡೆ, ಸಮಾಜ ಕಲ್ಯಾಣ ಅಧಿಕಾರಿ ಮತ್ತು ಸಿಬಂದಿ, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next