Advertisement

ಅಂಬೇಡ್ಕರ್‌ ಸಮಾವೇಶಕ್ಕೆ ಇಂದು ತೆರೆ

11:20 AM Jul 23, 2017 | |

ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸಿರುವ ಮೂರು ದಿನಗಳ “ಡಾ. ಬಿ.ಆರ್‌. ಅಂಬೇಡ್ಕರ್‌ ಅಂತರರಾಷ್ಟ್ರೀಯ ಸಮಾವೇಶ’ಕ್ಕೆ ಭಾನುವಾರ (ಜು.23) ತೆರೆ ಬೀಳಲಿದೆ. ಮುಖ್ಯ ವೇದಿಕೆ ಕಾರ್ಯಕ್ರಮ, 35ಕ್ಕೂ ಹೆಚ್ಚು ಸಮಾನಂತರ ಗೋಷ್ಠಿಗಳು, ಮುಖ್ಯಮಂತ್ರಿಯವರೊಂದಿಗೆ ಸಂವಾದ ಮತ್ತು ಸಮಾರೋಪ ಕಾರ್ಯಕ್ರಮದ ಮೂಲಕ ಅಂತರರಾಷ್ಟ್ರೀಯ ಸಮಾವೇಶ ಕೊನೆಗೊಳ್ಳಲಿದೆ. 

Advertisement

ಇದರಲ್ಲಿ ಪ್ರಮುಖವಾಗಿ ಬೆಳಿಗ್ಗೆ 9.30ಕ್ಕೆ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಶಶಿ ತರೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಬಿ-3 ವೇದಿಕೆಯಲ್ಲಿ “ಅಂಬೇಡ್ಕರ್‌, ಸಾಮಾಜಿಕ ನ್ಯಾಯ ಮತ್ತು ಕರ್ನಾಟಕದ ಸಾಮಾಜಿಕ ಚಳವಳಿಗಳು’ ಕುರಿತು ನಡೆಯುವ ಗೋಷ್ಠಿಯಲ್ಲಿ ಬರಗೂರು ರಾಮಚಂದ್ರಪ್ಪ, ಅರವಿಂದ ಮಾಲಗತ್ತಿ, ದಿನೇಶ್‌ ಅಮಿನ್‌ಮಟ್ಟು, ಮುಜಫ‌ರ್‌ ಅಸಾದಿ, ಎನ್‌.ಎಸ್‌. ಶಂಕರ್‌, ಶಿವರುದ್ರ ಕಲ್ಲೋಳಿಕರ ವಿಷಯ ಮಂಡಿಸಲಿದ್ದು, ಡಾ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿಲಿದ್ದಾರೆ.

ಅದೇ ರೀತಿ ಮಧ್ಯಾಹ್ನ 11.15ರಿಂದ 12.45ರವರೆಗೆ ಬಿ-6 ವೇದಿಕೆಯಲ್ಲಿ ನಡೆಯುವ “ವಿಚಾರವಂತ ಕರ್ನಾಟಕದ ನಿರ್ಮಾಣ-ಚಿಂತನೆ, ಸಂಘಟನೆ ಮತ್ತು ಹೋರಾಟ’ ಗೋಷ್ಠಿಯಲ್ಲಿ ಬಿ. ಗಂಗಾಧರಮೂರ್ತಿ, ಅನುಸೊಯಮ್ಮ, ಮಂಗ್ಳೂರು ವಿಜಯ, ಶೂದ್ರ ಶ್ರೀನಿವಾಸ, ಅನಂತನಾಯಕ್‌ ಮತ್ತಿತರರು ವಿಷಯ ಮಂಡಿಸಲಿದ್ದು, ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. “ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ: ಕರ್ನಾಟಕದ ಅನುಭವ’ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ರವಿವರ್ಮಾಕುಮಾರ್‌ ವಹಿಸಲಿದ್ದಾರೆ. 

ಸಿಎಂ ಜತೆ ಸಂವಾದ: ಇದೇ ವೇಳೆ ಸಂಜೆ 3.45ರಿಂದ 5.15 ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ನಡೆಯಲಿದೆ. ವಿಮರ್ಶಕ ರಾಜೇಂದ್ರ ಚೆನ್ನಿ ಸಂವಾದ ನಡೆಸಿಕೊಡಲಿದ್ದು, ಎಸ್‌. ಜಾಫೆಟ್‌, ವೆಲೆರಿಯನ್‌ ರೂಡ್ರಿಗಸ್‌, ಕೆ. ನೀಲಾ, ಡಿ. ಉಮಾಪತಿ, ಕೆ.ಬಿ. ಸಿದ್ದಯ್ಯ, ನಟರಾಜ ಹುಳಿಯಾರ, ಬೊಳವಾರು ಮಹ್ಮದ್‌ ಕುಂಇ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.45ಕ್ಕೆ ಆರಂಭವಾಗಲಿರುವ ಮುಕ್ತಾಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಸಮಾರೋಪ ಭಾಷಣ ಮಾಡಲಿದ್ದು, ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಮತ್ತಿತರರು ಭಾಗವಹಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next