Advertisement

ಅಂಬೇಡ್ಕರ್‌ ಬೌದ್ಧಧರ್ಮ ದೀಕ್ಷಾ ದಿನ ಆಚರಣೆ

02:59 PM Oct 19, 2020 | Suhan S |

ದೇವನಹಳ್ಳಿ: ಡಾ.ಬಿ.ಆರ್‌.ಅಂಬೇಡ್ಕರ್‌ ರವರಸಂವಿಧಾನದ ಮೂಲಕ ಹಕ್ಕು ಪಡೆದು ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬಾಳಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಹಾಕಬೇಕಿದ್ದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಬೌದ್ಧ ಧರ್ಮ ವನ್ನು ಒಪ್ಪಿ ದೀಕ್ಷೆ ಪಡೆದ ದಿನವನ್ನು ಆಚರಿಸುತ್ತಿದ್ದೇವೆ ಎಂದು ಕರ್ನಾಟಕ ದಸಂಸ ರಾಜ್ಯ ಸಂಘಟನಾ ಸಂಚಾಲಕಕಾರಹಳ್ಳಿ ಶ್ರೀನಿವಾಸ್‌ಹೇಳಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕರ್ನಾಟಕ ದಸಂಸ (ಅಂಬೇಡ್ಕರ್‌ ವಾದ) ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಬೌದ್ಧ ಧರ್ಮ ದೀಕ್ಷಾ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರು ಇಡೀ ಪ್ರಪಂಚಕ್ಕೆ ಶ್ರೇಷ್ಠ ಸಂವಿಧಾನ ಕೊಡುಗೆ ನೀಡಿದ್ದಾರೆ. ಬೌದ್ಧ ಧರ್ಮವನ್ನು ಒಪ್ಪಿ ಬುದ್ಧನ ಪಂಚಶೀಲ ಹಾಗೂ ಅಷ್ಟಾಂಗ ಮಾರ್ಗ ಅನುಸರಿಸಬೇಕೆಂದರು.

ತಾಲೂಕುದಸಂಸಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಇತಿಹಾಸವನ್ನು ತಮ್ಮ ಮಕ್ಕಳಿಗೆ ತಿಳಿಸಿ ಕೊಡಬೇಕು. ಪ್ರತಿ ಸಮಾಜದವರಿಗೆ ಮೀಸಲಾತಿ ಹಕ್ಕು, ಮತದಾನದ ಹಕ್ಕನ್ನು ನೀಡಿದ್ದಾರೆ. ಸರ್ವರಿಗೂ ಸಮಪಾಲು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ದಸಂಸ (ಅಂಬೇಡ್ಕರ್‌ ವಾದ)ಪ್ರಧಾನ ಸಂಚಾಲಕಬಿಸ್ನಹಳ್ಳಿ ಮೂರ್ತಿ, ಸಂಘಟನಾ ಸಂಚಾಲಕ ಜೋಗಿಹಳ್ಳಿ ನಾರಾಯಣ ಸ್ವಾಮಿ, ಆವತಿ ತಿಮ್ಮರಾಯಪ್ಪ, ಮುನಿಸ್ವಾಮಿ, ಜಿಲ್ಲಾ ಸಮಿತಿ ಸದಸ್ಯ ಎಚ್‌. ಕೆ.ವೆಂಕಟೇಶಪ್ಪ, ಮುಖಂಡರಾದ ಡಿ.ಕೆ.ವೇಲು, ನಾರಾಯಣಸ್ವಾಮಿ, ಹೊಸಕೋಟೆ ಲಕ್ಷ್ಮಣ್‌, ಸುರೇಶ್‌, ರಮೇಶ್‌, ಲಕ್ಷ್ಮೀನಾರಾಯಣ, ಪ್ರಕಾಶ್‌, ವೆಂಕಟೇಶ್‌, ಕೆಂಪರಾಜು, ನಿತಿನ್‌, ರವಿಕುಮಾರ್‌, ವಿಜಯಪುರ ರಮೇಶ್‌, ಕೃಷ್ಣಪ್ಪ ನಾಯಕ ಇದ್ದರು.

ಮಹಿಳೆಯರು ಕೃಷಿಯಲ್ಲಿ ಪ್ರಗತಿ ಸಾಧಿಸಲಿ :

Advertisement

ವಿಜಯಪುರ: ಗ್ರಾಮೀಣ ಭಾಗದ ಮಹಿಳೆಯರು ಕೃಷಿಯಲ್ಲೂ ಪ್ರಗತಿ ಹೊಂದಬೇಕಿದ್ದು ಈ ಹಿಂದಿನ ಕೃಷಿ ಪದ್ಧತಿ ಅನುಸರಿಸಿದರೆ ಉತ್ತಮ ಬೆಳೆ ಬೆಳೆಯಲು ಸಹಕಾರಿ ಎಂದು ತಾಲೂಕುಕೃಷಿ ಇಲಾಖೆ ಅಧಿಕಾರಿ ವೀಣಾ ತಿಳಿಸಿದರು.

ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ರೈತ ಮಹಿಳಾ ದಿನಾಚರಣೆ, ಕಿಸಾನ್‌ ಗೋಷ್ಠಿ ಮತ್ತು ತರಬೇತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಇಳುವರಿ ಬಂದರೆ ತರಕಾರಿಗೆ ಹೆಚ್ಚಿನ ಬೆಲೆ ಬರುತ್ತದೆ. ಮಹಿಳೆಯರು ಉತ್ತಮ ತರಕಾರಿ ಸೇವಿಸಿದರೆ ಆರೋಗ್ಯವೃದ್ಧಿಯಾಗುತ್ತದೆ. ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಪುರುಷರಿಗಿಂತ ಮಹಿಳೆಯರು ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ. ಕೃಷಿ ಮಾಡಬೇಕೇ ಎಂದು ತಾತ್ಸಾರ ಮಾಡದೇ ಸಹಕಾರ ನೀಡಿದರೆ ಪ್ರಗತಿಪರ ರೈತರಾಗಬಹುದು ಎಂದರು.

ಆತ್ಮ ಯೋಜನೆ ತಾಲೂಕು ಅಧಿಕಾರಿ ಪುಷ್ಪಲತಾ ಮಾತನಾಡಿ, ರೈತ ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿಭಾಗವಹಿಸಿಅಭಿಪ್ರಾಯಹಂಚಿಕೊಂಡು ಕೃಷಿ ಪದ್ಧತಿ ಬಗ್ಗೆ ತಿಳಿದುಕೊಳ್ಳಬೇಕು. ಸಂಕೋಚ ಇಲ್ಲದೇಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂದರು.

ಹೋಬಳಿ ಕೃಷಿ ಅಧಿಕಾರಿ ಲಕ್ಷ್ಮೀ ನಾರಾಯಣ್, ಗ್ರಾಪಂ ಉಪಾಧ್ಯಕ್ಷರಾದ ಮಮತಾ ಕೃಷ್ಣ, ಸದಸ್ಯರಾದ ಭಾಗ್ಯಮ್ಮ, ಹೋಬಳಿ ಕೃಷಿ ಇಲಾಖೆ ಸಿಬ್ಬಂದಿ ಸೌಮ್ಯಾ, ನವ್ಯಾ, ಕಿರಣ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next