ಶಾರ್ಜಾ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಯುಎಇ ಚರಣದ ಹೈವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಲಿದೆ.
ಯುಎಇ ನಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯವಾಡಿದೆ. ಚೆನ್ನೈ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ದ ಯಾವುದೇ ಚಾಲೆಂಜ್ ಮಾಡದೆ ಹೀನಾಯ ಸೋಲನುಭವಿಸಿತ್ತು.
ಶಾರ್ಜಾದಲ್ಲಿ ಇಂದು ಮೊದಲ ಪಂದ್ಯದಲ್ಲಿ ನಡೆಯುತ್ತಿದೆ. ಇದುವರೆಗೆ ನಡೆದ ಪಂದ್ಯಗಳೆಲ್ಲಾ ದುಬೈ ಮತ್ತು ಅಬುಧಾಬಿಯಲ್ಲೇ ನಡೆದಿದೆ.
ಇದನ್ನೂ ಓದಿ:ಪಾಕ್ ಪ್ರವಾಸ ರದ್ದು ಮಾಡಿದವರು ಭಾರತಕ್ಕೆ ‘ನೋ’ ಎನ್ನಲ್ಲ: ಆಸೀಸ್ ಆಟಗಾರನ ಅಸಮಾಧಾನ
ಬೆಂಗಳೂರು ವಿರುದ್ಧ ರಾಯಲ್ ಪಂದ್ಯಕ್ಕೆ ಅಣಿಯಾಗಿರುವ ಸಿಎಸ್ ಕೆ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ಆಟಗಾರ ಅಂಬಾಟಿ ರಾಯುಡು ಅವರು ಗಾಯಗೊಂಡಿದ್ದು, ಇಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಒಂದು ವೇಳೆ ರಾಯುಡು ಫಿಟ್ ಆಗಿದಿದ್ದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಸಿಎಸ್ ಕೆ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ಇದುವರೆಗೆ ಎಂಟು ಪಂದ್ಯವಾಡಿರುವ ಸಿಎಸ್ ಕೆ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಆರ್ ಸಿಬಿ ತಂಡ ಐದು ಪಂದ್ಯಗಳನ್ನು ಗೆದ್ದು 10 ಅಂಕ ಸಂಪಾದಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.