Advertisement

Ambani ಪುತ್ರನ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಧಾರೆ

08:36 AM Mar 04, 2024 | Team Udayavani |

ಗಾಂಧೀನಗರ: ಉದ್ಯಮಿ ಮುಕೇಶ್‌ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂ ಟ್‌ ಅವರ ವಿವಾಹ ಪೂರ್ವ ಸಮಾರಂಭ ಅದ್ದೂರಿಯಾಗಿ ಪೂರ್ಣ­ ಗೊಂಡಿದೆ. ನಟ ಅಮಿತಾಭ್‌ ಬಚ್ಚನ್‌, ಸೂಪರ್‌ಸ್ಟಾರ್‌ ರಜಿನಿ­ಕಾಂತ್‌ ಸಹಿತ ಸಿನೆಮಾರಂಗದ ದಿಗ್ಗಜ್ಜರು ಪಾಲ್ಗೊಂಡಿ­ದ್ದಾರೆ. ವಿವಾಹಪೂರ್ವ ಸಮಾ ರಂಭಕ್ಕೆಂದೇ 1,000 ಕೋಟಿ ರೂ. ವೆಚ್ಚ ವಾ­ಗಿದೆ. ಕಾರ್ಯ ಕ್ರಮಕ್ಕೆ ದೇಶ ವಿದೇಶ ಗಳ ಹಲವಾರು ಗಾಯ­ಕರ ಕಾರ್ಯ­ಕ್ರಮ­ಗಳನ್ನು ಆಯೋಜಿಸಲಾಗಿತ್ತು.

Advertisement

ಅಂಬಾನಿ ದಂಪತಿ ನೃತ್ಯ
ಮುಕೇಶ್‌ ಅಂಬಾನಿ ಅವರು ಪತ್ನಿ ನೀತಾ ಜತೆಗೆ ಭರ್ಜರಿ ಸ್ಟೆಪ್ಸ್‌ ಹಾಕಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿ ಗಳನ್ನು ರಂಜಿಸಿದ್ದಾರೆ.”ಪ್ಯಾರ್‌ ಹುವಾ, ಇಕ್‌ರಾರ್‌ ಹುವಾ’ ಹಾಡಿಗೆ ಹೆಜ್ಜೆ ಹಾಕಿ, ಕೊಳಲು ನುಡಿಸಿದ ಅಂಬಾನಿ ಯನ್ನು ನೀತಾ ಅವರು ಆಲಂಗಿಸಿ ನೃತ್ಯದ ಮೆರುಗು ಹೆಚ್ಚಿಸಿದ್ದಾರೆ.

ಖಾನ್‌ತ್ರಯರ ನಾಟು
ಜನಪ್ರಿಯ ಸಿನೆಮಾ “ಆರ್‌ಆರ್‌ಆರ್‌’ ನ ನಾಟು ನಾಟು ಹಾಡಿಗೆ ಖಾನ್‌ ತ್ರಯ­ರಾದ ಸಲ್ಮಾನ್‌ ಖಾನ್‌, ಶಾರುಖ್‌, ಆಮಿರ್‌ ಹೆಜ್ಜೆ ಹಾಕಿ­ದ್ದಾರೆ. ಸಮಾ­ರಂಭದಲ್ಲಿ ನೆರೆದಿದ್ದವರನ್ನು ಜೈ ಶ್ರೀರಾಮ್‌ ಎನ್ನುತ್ತಾ ಶಾರುಖ್‌ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ಜಾಲತಾಣದಲ್ಲೂ ವೈರಲ್‌ ಆಗಿದೆ.

ಧೋನಿ “ದಾಂಡಿಯಾ’
ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಎಂ.ಎಸ್‌.ಧೋನಿಗೆ ಆಕಾಶ್‌ ಅಂಬಾನಿ ದಾಂಡಿಯಾ ನೃತ್ಯ ಕಲಿಸಿ­ದ್ದಾರೆ. ಜತೆಗೆ ಅವರನ್ನು “ಭಾಯಿ’ ಎಂದು ಕರೆದಿದ್ದಾರೆ. ಸಚಿನ್‌ ತೆಂಡುಲ್ಕರ್‌, ಹಾರ್ದಿಕ್‌ ಪಾಂಡ್ಯ, ಇಶಾನ್‌ ಕಿಶನ್‌ ಸೇರಿದಂತೆ ಇನ್ನಿತರ ಕ್ರಿಕೆಟಿಗರೂ ಭಾಗಿಯಾಗಿದ್ದಾರೆ.

ಇದನ್ನೂ ಓದಿ: IT ಪ್ಲಾಟ್‌ ಫಾರ್ಮ್ ಗಳಿಗೆ ಕೇಂದ್ರದ ಅನುಮತಿ ಕಡ್ಡಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next