Advertisement

ಅಂಬಾನಿ ವಾರ್ಷಿಕ ವೇತನ 15 ಕೋಟಿ ರೂ.

09:21 AM Jul 22, 2019 | Team Udayavani |

ಹೊಸದಿಲ್ಲಿ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಉದ್ಯಮಿ ಮುಕೇಶ್‌ ಅಂಬಾನಿ ವೇತನ 15 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ. ಸತತ 11ನೇ ವರ್ಷಕ್ಕೆ ಈ ವೇತನ ಮುಂದುವರಿಕೆ ಮಾಡಲಾಗಿದೆ. 2008ರಿಂದ ವೇತನ, ಭತ್ಯೆ ಮತ್ತು ಇತರ ಅಂಶಗಳನ್ನು ಒಳಗೊಂಡು ಈ ವೇತನ ಶ್ರೇಣಿ ಇದೆ. ನಗದು ಮೂಲಕವಾಗಿ ಸೇರಿಕೊಳ್ಳುವ ಇತರ ಅಂಶಗಳೂ ಸೇರಿದಂತೆ ಒಟ್ಟು 24 ಕೋಟಿ ರೂ. ಅವರಿಗೆ ಸಂದಾಯವಾಗುತ್ತದೆ. 2018-19ನೇ ವಿತ್ತೀಯ ವರ್ಷದಲ್ಲಿ ಅವರಿಗೆ ವಾರ್ಷಿಕವಾಗಿ 4.45 ಕೋಟಿ ರೂ. ವೇತನ ನಿಗದಿಯಾಗಿತ್ತು. 2017-18ನೇ ಸಾಲಿಗೆ ಹೋಲಿಕ ಮಾಡಿದರೆ ಕೊಂಚ ಕಡಿಮೆ. ಆ ವರ್ಷ ಅವರಿಗೆ 4.49 ಕೋಟಿ ರೂ. ವೇತನ ಇತ್ತು ಎಂದು ರಿಲಯನ್ಸ್‌ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next