Advertisement

ರಫೇಲ್‌ಗಾಗಿ ಐಎಎಫ್ ನೆಲೆಗಳ ಅಭಿವೃದ್ಧಿ

07:05 AM Oct 02, 2017 | Team Udayavani |

ಅಂಬಾಲ: ಹರಿಯಾಣದ ಅಂಬಾಲಾ, ಹಸಿಮರ ದಲ್ಲಿರುವ ಭಾರತೀಯ ವಾಯುನೆಲೆಗಳಲ್ಲಿರುವ ಮೂಲ ಸೌಕರ್ಯ ಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಸರಕಾರ 220 ಕೋಟಿ ರೂ.ಗಳನ್ನು ನೀಡಿದೆ. 

Advertisement

2019ರ ಸೆಪ್ಟೆಂಬರ್‌ ಒಳಗಾಗಿ ಐಎಎಫ್ಗೆ ಮೊದಲ ಹಂತದ ಅತ್ಯಾಧುನಿಕ ರಫೇಲ್‌ ಜೆಟ್‌ಗಳನ್ನು ಸೇರ್ಪಡೆ ಮಾಡಲಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 40-50 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ರಫೆಲ್‌ಗಾಗಿ 14 ಶೆಲ್ಟರ್‌ಗಳು, ಹ್ಯಾಂಗರ್‌ ಮತ್ತು ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಐಎಎಫ್ನ ಹಿರಿಯ 
ಅಧಿಕಾರಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ಥಾನ ಗಡಿ ಭಾಗದಲ್ಲಿರುವ ಅಂಬಾಲ ವಾಯು ನಲೆ ಅತ್ಯಂತ ಪ್ರಮುಖವೆಂದೇ ಪರಿಗಣಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಗೆ ಅಲ್ಲಿಂದ 220 ಕಿಮೀ ದೂರವಷ್ಟೇ ಇದೆ. ಇದರ ಜತೆಗೆ ಹಸಿಮರ ನೆಲೆಯಲ್ಲಿ ಸಿಮ್ಯುಲೇಟರ್‌ ಆಧಾರಿತ ತರಬೇತಿ ಕೇಂದ್ರ ಆರಂಭಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next