ನವದೆಹಲಿ: ಜನಪ್ರಿಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಇನ್ಮುಂದೆ ಕ್ಯಾಶ್ ಆನ್ ಡೆಲಿವರಿ ಸಂದರ್ಭದಲ್ಲಿ 2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಗುರುವಾರ (ಸೆ.14) ತಿಳಿಸಿದೆ. 2000 ಮುಖಬೆಲೆ ನೋಟಿನ ವಿನಿಮಯ ಅಥವಾ ಠೇವಣಿ ದಿನಾಂಕ ಸಮೀಪಿಸುತ್ತಿರುವ ನಡುವೆ ಈ ಘೋಷಣೆ ಹೊರಬಿದ್ದಿದೆ.
ಇದನ್ನೂ ಓದಿ:Nipah virus Fear:ನಿಫಾಗೆ ಇಬ್ಬರು ಬಲಿ: ಗಡಿಭಾಗದಲ್ಲಿ ಜನರಲ್ಲಿ ಆತಂಕ
ಸೆಪ್ಟೆಂಬರ್ 19ರಿಂದ ಕ್ಯಾಶ್ ಆನ್ ಡೆಲಿವರಿ ಸಂದರ್ಭದಲ್ಲಿ 2,000 ರೂ. ಮುಖಬೆಲೆಯ ನೋಟನ್ನು ಸ್ವೀಕರಿಸುವುದಿಲ್ಲ ಎಂದು ಅಮೆಜಾನ್ ತಿಳಿಸಿದೆ. 2,000 ರೂ. ನೋಟುಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಅಥವಾ ಠೇವಣಿ ಮಾಡಲು ಸಾರ್ವಜನಿಕರಿಗೆ ಸೆಪ್ಟೆಂಬರ್ 30ರವರೆಗೆ ಮಾತ್ರ ಅವಕಾಶವಿದೆ.
“ಸದ್ಯ ಅಮೆಜಾನ್ 2000 ರೂ. ಮುಖಬೆಲೆ ನೋಟುಗಳನ್ನು ಸ್ವೀಕರಿಸುತ್ತಿದೆ. ಆದರೆ 2023ರ ಸೆಪ್ಟೆಂಬರ್ 19ರಿಂದ ನಾವು Cash on Delivery ಸಂದರ್ಭದಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಅಮೆಜಾನ್ ತಿಳಿಸಿದೆ.
2000 ರೂ. ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಮೇ ತಿಂಗಳಿನಲ್ಲಿ ಘೋಷಿಸಿತ್ತು. ಬಳಿಕ 2000 ಮುಖಬೆಲೆ ನೋಟನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಅಥವಾ ಠೇವಣಿ ಮಾಡಲು 2023ರ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿತ್ತು.