Advertisement

ಇ ಕಾಮರ್ಸ್ ದೈತ್ಯ ಅಮೇಜಾನ್ 18 ಸಾವಿರ ಉದ್ಯೋಗಿಗಳನ್ನು ವಜಾ ಮಾಡುತ್ತಾ? ಕಂಪೆನಿ ಹೇಳೋದೇನು

05:41 PM Jan 05, 2023 | |

ನವದೆಹಲಿ: ಇ- ಕಾಮರ್ಸ್ ದೈತ್ಯ ಕಂಪೆನಿ ಅಮೇಜಾನ್ ತನ್ನ 18 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದೆಯೆಂದು ಹೇಳಿಕೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಹತ್ತುಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿಕೊಂಡಿದ್ದ ಕಂಪೆನಿ ಇದೀಗ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿಕೊಂಡಿದೆ.

Advertisement

ಕಂಪೆನಿಯ ಹೇಳಿಕೆಯಿಂದ ಉದ್ಯೋಗಿಗಳು ಆತಂಕಕೀಡಾಗಿದ್ದಾರೆ, ಕಂಪನಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಉದ್ಯೋಗ ಕಡಿತಕ್ಕೆ ರಿಟೇಲ್ ಮಾರಾಟ, ಮಾನವ ಸಂಪನ್ಮೂಲ ಹಾಗೂ ಉಪಕರಣಗಳ ವಿಭಾಗವನ್ನು ಕೇಂದ್ರೀಕರಿಸಲಿದೆ ಎಂದು ಅಮೆಜಾನ್‌ ಸಿಇಒ ಆ್ಯಂಡಿ ಜೆಸ್ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಮೇಜಾನ್ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿದ್ದು ಇದಕ್ಕೆ ಉದ್ಯೋಗ ಕಡಿತವೇ ಮಾರ್ಗ ಎಂದು ಜೆಸ್ಸಿ ಹೇಳಿಕೊಂಡಿದ್ದಾರೆ.

ಕೇವಲ ಅಮೇಜಾನ್ ಮಾತ್ರವಲ್ಲದೆ ಎಚ್‌ಪಿ, ಮೆಟಾ, ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ಕಡಿತ ಮಾಡಲು ಮುಂದಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ನ ಇನ್ನೊಂದು ಹೆಸರೇ ಭ್ರಷ್ಟಾಚಾರ, ಕಮಿಷನ್ ಮತ್ತು ಜಾತೀಯತೆ : ಜೆಪಿ ನಡ್ಡಾ

 

Advertisement
Advertisement

Udayavani is now on Telegram. Click here to join our channel and stay updated with the latest news.

Next