Advertisement

ಅಮೇಜಾನ್ ಆರಂಭಿಸಿದೆ ಮಿನಿಟಿವಿ.! ಏನಿದೆ ವಿಶೇಷ..?

04:24 PM May 16, 2021 | Team Udayavani |

ನವ ದೆಹಲಿ : ಜಗತ್ತಿನ ದೈತ್ಯ ಇ-ಕಾಮರ್ಸ್ ವೆಬ್‌ ಸೈಟ್‌ ಗಳಲ್ಲಿ ಒಂದಾದ ಅಮೆಜಾನ್ ತನ್ನ ಭಾರತೀಯ ಬಳಕೆದಾರರಿಗಾಗಿ ಮಿನಿಟಿವಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್  ನನ್ನು ಆರಂಭಿಸಿ ಘೋಷಣೆ ಮಾಡಿದೆ.

Advertisement

ಹೊಸ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ನನ್ನು ಪ್ರಾರಂಭಿಸುವುದರೊಂದಿಗೆ, ಅಮೆಜಾನ್ ಈಗ ಪ್ರೈಮ್ ವಿಡಿಯೋ ಸೇರಿದಂತೆ ಎರಡು ವಿಡಿಯೋ ಮನರಂಜನಾ ವೇದಿಕೆಗಳನ್ನು ಹೊಂದಿದೆ.

ಭಾರತೀಯ ಬಳಕೆದಾರರಿಗೆ ಅಮೇಜಾನ್ ಸಂಸ್ಥೆ ಆರಂಭಿಸಿದ ಈ  ಮಿನಿಟಿವಿ ಸಂಪೂರ್ಣವಾಗಿ ಉಚಿತವಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಅಗತ್ಯವಿಲ್ಲ, ಆದರೆ ಪ್ರೈಮ್ ವೀಡಿಯೊಗೆ ಪ್ರೈಮ್ ಚಂದಾದಾರಿಕೆ ಮಾಡಬೇಕಾಗಿರುವುದು ಅಗತ್ಯ.

ಇದನ್ನೂ ಓದಿ : ಜನರಿಂದ ಹೆಚ್ಚಿನ ದರ ವಸೂಲು ಮಾಡುವ ಆಸ್ಪತ್ರೆಗಳ ವಿರುದ್ಧ ಕ್ರಮ: ರಮೇಶ ಜಾರಕಿಹೊಳಿ

ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಮೇಜಾನ್, ಆ್ಯಂಡ್ರಾಯ್ಡ್ ಫೋನ್‌ ಗಳಿಗಾಗಿ ಅಮೆಜಾನ್‌ ನ ಶಾಪಿಂಗ್ ಅಪ್ಲಿಕೇಶನ್‌ ಗಳಲ್ಲಿ ಮಿನಿಟಿವಿ ಲಭ್ಯವಿದ್ದು, ಮುಂಬರುವ ತಿಂಗಳುಗಳಲ್ಲಿ ಮಿನಿ ಟಿವಿಯನ್ನು ಐ ಒ ಎಸ್ ಆಪ್ ಮತ್ತು ಮೊಬೈಲ್ ವೆಬ್‌ ನಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

Advertisement

“ಮಿನಿಟಿವಿ ಬಿಡುಗಡೆಯೊಂದಿಗೆ, ಅಮೆಜಾನ್.ಇನ್ ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಶಾಪಿಂಗ್ ಅಪ್ಲಿಕೇಶನ್‌ ನಲ್ಲಿ ಲಕ್ಷಾಂತರ ಉತ್ಪನ್ನಗಳಿಂದ ಉಚಿತ ಮನರಂಜನಾ ವೀಡಿಯೊಗಳನ್ನು ವಿಕ್ಷೀಸುವ ಅವಕಾಶ ಸಿಗಲಿದೆ” ಎಂದು ಕೂಡ ಹೇಳಿದೆ.

ಮಿನಿಟಿವಿಯಲ್ಲಿ  ವೆಬ್ ಸಿರೀಸ್, ಫುಡ್, ಟೆಕ್ ನ್ಯೂಸ್, ಕಾಮಿಡಿ ಷೋ, ಬ್ಯೂಟಿ, ಫ್ಯಾಷನ್ ಇತ್ಯಾದಿ ವಿಷಯಗಳಲ್ಲಿ ವೃತ್ತಿಪರ ಕಂಟೆಂಟ್ ತಯಾರಿಸಿ ಅವುಗಳನ್ನು ಕ್ಯೂರೆಟ್ ಮಾಡಲಾಗಿದೆ.

“ವಿಕ್ಷಕರಿಗೆ  ಹೊಸ ಉತ್ಪನ್ನಗಳು ಹಾಗೂ ಫಲಿತಾಂಶಗಳ ಕುರಿತು ತಾಂತ್ರಿಕ ಟ್ರ್ಯಾಕಿನ್ ಟೆಕ್ , ಫ್ಯಾಶನ್ ಹಾಗೂ ಬ್ಯೂಟಿ ತಜ್ಞ ಪ್ರೇರಣಾ ಛಾಬ್ರಾ, ಸೇಜಲ್ ಕುಮಾರ್, ಜೋವಿಕ್ ಜಾರ್ಜ್, ಮಾಳವಿಕಾ ಸೀತಲಾನಿ ಹಾಗೂ ಶಿವಶಕ್ತಿ ಅವರುಗಳಿಂದ ನೋಟಿಫೈಗೊಳಿಸಲಾಗುವುದು.

ಆಹಾರ ಪ್ರಿಯರು ಕುಕ್ ವಿದ್ ನಿಶಾ, ಗ್ಲೋಬಲ್ ಕಂಟೆಂಟ್ ಸೇರಿದಂತೆ ಕವಿತಾ ಕಿಚನ್ ಅನ್ನು ಆನಂದಿಸಬಹುದು” ಎಂದು ಅಮೆಜಾನ್ ಹೇಳಿದೆ. ಮುಂಬರುವ ದಿನಗಳಲ್ಲಿ ಮಿನಿಟಿವಿಯಲ್ಲಿ ಇನ್ನಷ್ಟು ಹೊಸ ಹಾಗೂ ಎಕ್ಸ್ಕ್ಲೂಸಿವ್ ವಿಡಿಯೋಗಳನ್ನು ಸೇರಿಸಲಾಗುವುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ : ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

Advertisement

Udayavani is now on Telegram. Click here to join our channel and stay updated with the latest news.

Next