Advertisement

ಬಡ್ಡಿಯಿಲ್ಲದೇ ವಸ್ತು ಸಾಲ ಕೊಡುತ್ತೆ ಅಮೆಜಾನ್‌!

01:07 PM Apr 30, 2020 | mahesh |

ಮುಂಬೈ: ಕೋವಿಡ್ ದಿಂದ ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಅಮೆಜಾನ್‌ ಇಂಡಿಯಾ ಅಪೂರ್ವ ಅವಕಾಶ ನೀಡಿದೆ. ಗ್ರಾಹಕರು ಅಮೆಜಾನ್‌ನಲ್ಲಿರುವ ಯಾವುದೇ ವಸ್ತುವನ್ನು ಸಾಲವಾಗಿ ಕೊಳ್ಳಬಹುದು. ಹಣವನ್ನು ಮುಂದಿನ ತಿಂಗಳು ಯಾವುದೇ ಬಡ್ಡಿದರವಿಲ್ಲದೇ ಕಟ್ಟಿದರಾಯಿತು! ಅಮೆಜಾನ್‌ ಪೇ ಲೇಟರ್‌ ಇನ್‌ ಇಂಡಿಯಾ ಎಂಬ ಹೆಸರಿನ ಈ ಯೋಜನೆ, ಕೋವಿಡ್ ದಿಗ್ಬಂಧನದ ಸಂದರ್ಭದಲ್ಲಿಯೂ ಬಳಕೆಗೆ ಲಭ್ಯವಿದೆ.

Advertisement

ಕಂತಿನ ಅವಕಾಶ: 12 ತಿಂಗಳ ಮಾಸಿಕ ಕಂತಿನಲ್ಲೂ ಕೊಳ್ಳಬಹುದು. ಇದಕ್ಕೆ ಆರಂಭಿಕವಾಗಿ ಶೇ.1.5ರಿಂದ 2ರಷ್ಟು ಬಡ್ಡಿಯಿದ್ದು, ಕಡೆಗೆಕಡೆಗೆ ಶೂನ್ಯಕ್ಕಿಳಿಯುತ್ತದೆ. ಕನಿಷ್ಠ 1 ರೂ.ನಿಂದ ಗರಿಷ್ಠ 60,000 ರೂ. ವರೆಗೆ ಸಾಲವಾಗಿ ಖರೀದಿಸಲು ಅವಕಾಶವಿದೆ.

ಹೇಗೆ?: ಗ್ರಾಹಕರು ಅಮೆಜಾನ್‌ ಪೇ ಸೇವೆಗೆ ಮೊದಲು ನೋಂದಾಯಿಸಿಕೊಳ್ಳಬೇಕು. ಸದ್ಯ ಇದನ್ನು ಮೊಬೈಲ್‌ ಆ್ಯಪ್‌ನಲ್ಲಿ ಮಾತ್ರ ಮಾಡಲು ಸಾಧ್ಯ. ಕಂಪ್ಯೂಟರ್‌ನಲ್ಲಿ ಈ ಸೇವೆ ಇನ್ನೂ ಆರಂಭವಾಗಿಲ್ಲ. ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ವ್ಯವಸ್ಥೆಯಡಿ, ಗ್ರಾಹಕರು ತಮ್ಮ ಪೂರ್ಣ ಮಾಹಿತಿ ನೀಡಬೇಕು. ಅದನ್ನು ಅಮೆಜಾನ್‌ ಅಂಗೀಕರಿಸಿದ ನಂತರ ಕೊಳ್ಳುವಿಕೆಯನ್ನು ಆರಂಭಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next