Advertisement

ಮಹದೇಶ್ವರಸ್ವಾಮಿಗೆ ಅಮಾವಾಸ್ಯೆ ಪೂಜೆ

04:00 PM Nov 16, 2020 | Suhan S |

ಯಳಂದೂರು: ಪಟ್ಟಣ ಹಾಗೂ ತಾಲೂಕಿನಾದ್ಯಂತ ಭಾನುವಾರ ದೀಪಾವಳಿಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ನಡೆದವು. ಪಟ್ಟಣದ ಕಂದಹಳ್ಳಿ ಪ್ರಸಿದ್ಧ ಪೌರಾಣಿಕ ಮಹದೇಶ್ವರ ದೇಗುಲದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನಡೆಯಿತು.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ದೇವಾಲಯಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕಂದಹಳ್ಳಿ ಮಹದೇಶ್ವರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ದೇವಸ್ಥಾನದ ಮಂಡಳಿ ಅನುಮತಿ ನೀಡಿತ್ತು. ಬೆಳಗ್ಗೆಯಿಂದಲೇ ದೇವರಿಗೆ ವಿವಿಧ ಅಲಂಕಾರ, ಅಭಿಷೇಕ ನೆರವೇರಿಸಲಾಗಿತ್ತು. ಮಹಾಲಯ ಅಮವಾಸ್ಯೆ ನಿಮಿತ್ತ ಪಟ್ಟಣದಲ್ಲಿ ದಿನಸಿ, ತರಕಾರಿ, ಹಣ್ಣುಹೂ ವ್ಯಾಪಾರಿಗಳಿಗೆಭರ್ಜರಿವ್ಯಾಪಾರವಾಯಿತು.ಬೆಲೆ ಏರಿಕೆಯ ನಡುವೆಯೂ ಉತ್ಸಾಹದಿಂದ ಸಾರ್ವಜನಿಕರು ಹಬ್ಬದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೈದಾನ ನಿರ್ಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ :

ಕೊಳ್ಳೇಗಾಲ: ಕೋವಿಡ್ ಸಂಕಷ್ಟದಲ್ಲೂ ಜಯಕರ್ನಾಟಕ ಸಂಘಟನೆಯ ತಾಲೂಕುಘಟಕವುಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬ್ಯಾಡ್ಮಿಂಟನ್‌ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಸ್‌.ಬಾಲ ರಾಜ್‌ ತಿಳಿಸಿದರು.

Advertisement

ಪಟ್ಟಣದ ಅಫೀಸಿಯಲ್‌ ಕ್ಲಬ್‌ಮೈದಾನದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿಮಾತನಾಡಿದ ಅವರು, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸ್ನೇಹ ಭಾವನೆ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿ ಶಕ್ತಿ ಹೆಚ್ಚುತ್ತದೆ. ಪ್ರೀತಿ, ವಾತ್ಸಲ್ಯ, ಬಾಂಧವ್ಯ ಬೆಳೆಯುತ್ತದೆ. ಕ್ರೀಡಾಂಗಣಗಳನ್ನು ನಿರ್ಮಿಸಿ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಿದೆ. ನಾನು ಕ್ಷೇತ್ರದ ಶಾಸಕನಾಗಿದ್ದ ವೇಳೆ ಕ್ರೀಡೆಯನ್ನು ಪ್ರೋತ್ಸಾಹಿಸಲು ಕ್ರೀಡಾಂಗಣ ಮಂಜೂರು ಮಾಡಿಸಿ ಕ್ರೀಡಾಪಟುಗಳನ್ನು ಹೆಚ್ಚು ಪ್ರೋತ್ಸಾಹಿಸಲು ಮುಂದಾಗಿದ್ದೆ ಎಂದು ಅವರು ಸ್ಮರಿಸಿದರು.

ಪಂದ್ಯಾವಳಿಯಲ್ಲಿ ಪ್ರದೀಪ್‌, ಪರಶಿವ ತಂಡ ಪ್ರಥಮ ಬಹುಮಾನ, ರಘು ಮತ್ತು ನಾಗೇಂದ್ರ ತಂಡ ದ್ವಿತೀಯ, ಪಾಪಣ್ಣ ಮತ್ತು ಮಲ್ಲಿಕಾರ್ಜುನತಂಡವು ತೃತೀಯ ಹಾಗೂ ಸುನೀಲ್‌ತೇಜ್‌ ತಂಡವು ಚತುರ್ಥ ಬಹುಮಾನ ಪಡೆಯಿತು.

ಕಾರ್ಯಕ್ರಮದಲ್ಲಿ ಅಫೀಷಿಯಲ್‌ ಕ್ಲಬ್‌ನ ಅಧ್ಯಕ್ಷ ರಾಮಕೃಷ್ಣ, ಅಂತಾ ರಾಷ್ಟ್ರೀಯ ಕ್ರೀಡಾಪಟು ಬಸವೇಗೌಡ, ಜಿಲ್ಲಾ ಕಾರ್ಯದರ್ಶಿ ಮಹೇಶ್‌, ಜಿಲ್ಲಾ ಸಂಚಾಲಕ ನವೀನ್‌, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಪ್ರಭು, ಪ್ರಕಾಶ್‌,ಜಿಲ್ಲಾ ಉಪಾಧ್ಯಕ್ಷ ಶಿವಾನಂದ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲೀಲಾವತಿ, ಚಂದು, ಆನಂದ್‌, ವಿಶ್ವ, ಮುತ್ತಣ್ಣ, ನಟ ರಾಜು, ಕೆ.ಕೆ.ಮೂರ್ತಿ, ಬಾಬು, ಸಹಾಯಕ ಎಂಜಿನಿಯರ್‌ ಮಹದೇವ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next