Advertisement

ಅಮರನಾಥ ಯಾತ್ರೆಗೆ 1.70 ಲಕ್ಷ ಯಾತ್ರಿಕರಿಂದ ನೋಂದಣೆ

12:28 PM May 16, 2018 | Team Udayavani |

ಜಮ್ಮು : ಮುಂದಿನ ತಿಂಗಳು ಜೂನ್‌ 28ರಿಂದ ಆರಂಭಗೊಳ್ಳುವ ಆರು ತಿಂಗಳ ಅವಧಿಯ, ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಅಮರನಾಥ್‌ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಳ್ಳಲು ಸುಮಾರು 1.70 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ.

Advertisement

ದೇಶಾದ್ಯಂತದ ವಿವಿಧ ಕೌಂಟರ್‌ಗಳಲ್ಲಿ 1.69 ಲಕ್ಷ ಯಾತ್ರಿಕರು  ಅಮರನಾಥ ಗುಹಾ ದೇವಾಲಯ ಯಾತ್ರೆಗೆ  ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ ನೋಂದಾವಣೆ ಪ್ರಕ್ರಿಯೆ ಈಗಲೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

1.69 ಲಕ್ಷ ಯಾತ್ರಿಕರ ಪೈಕಿ 28,516 ಮಂದಿ ಯಾತ್ರಿಕರು ಹೆಲಿಕಾಪ್ಟರ್‌ ಮೂಲಕ ತಮ್ಮ ಯಾತ್ರೆಯನ್ನು ಬುಕ್‌ ಮಾಡಿದ್ದಾರೆ. 2,122 ಮಂದಿ ವಿದೇಶಿ ಯಾತ್ರಿಕರು ಇದರಲ್ಲಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next