Advertisement

ಅಮರನಾಥ ಯಾತ್ರೆ: 48ಕ್ಕೇರಿದ ಮೃತ ಯಾತ್ರಿಕರ ಸಂಖ್ಯೆ

11:39 AM Jul 19, 2017 | udayavani editorial |

ಶ್ರೀನಗರ : ಈ ವರ್ಷ ಅಮರನಾಥ ಯಾತ್ರೆಯಲ್ಲಿ ಮೃತಪಟ್ಟ ಯಾತ್ರಿಕರ ಸಂಖ್ಯೆ 48ಕ್ಕೇರಿದೆ. 

Advertisement

60ರ ಹರೆಯದ ಮಧ್ಯಪ್ರದೇಶದ ಯಾತ್ರಿಕ ರಾಮೇಶ್ವರ ಪತಿದಾರ್‌ ಅವರು ನಿನ್ನೆ ಸಂಜೆ ಪಹಲ್‌ಗಾಂವ್‌ನ  ನನ್‌ವಾನ್‌ ಎಂಬಲ್ಲಿನ  ಮೂಲ ಶಿಬಿರಕ್ಕೆ ಪಿಸೂ ಶಿಖರದಿಂದ ಮರಳುವಾಗ ಕೊನೆಯುಸಿಳೆದರು. ಇವರ ಸಾವಿನೊಂದಿಗೆ ಮೃತರ ಸಂಖ್ಯೆ 48ಕ್ಕೇರಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಮರನಾಥ ಯಾತ್ರೆಯಲ್ಲಿ ಈ ತನಕ ನೈಸರ್ಗಿಕ ಕಾರಣಗಳಿಗೆ ಮೃತಪಟ್ಟವರು 20; ಉಗ್ರರಿಂದ ಹತರಾದವರು ಎಂಟು ಯಾತ್ರಿಕರು; ಉಳಿದ 20 ಮಂದಿ ಬೇರೆ ಬೇರೆ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next