Advertisement

ಅಂಡರ್‌-17 ಫ‌ುಟ್ಬಾಲ್‌ ವಿಶ್ವಕಪ್‌ ಭಾರತಕ್ಕೆ ಅಮರ್ಜಿತ್‌ ನಾಯಕ

11:34 AM Sep 20, 2017 | |

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ಅ. 6ರಿಂದ ಆರಂಭವಾಗಲಿರುವ ಅಂಡರ್‌-17 ಫಿಫಾ ಫ‌ುಟ್ಬಾಲ್‌ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮಣಿಪುರಿ ಮಿಡ್‌ಫಿàಲ್ಡರ್‌ ಅಮರ್ಜಿತ್‌ ಸಿಂಗ್‌ ಖೀಯಾಮ್‌ ಮುನ್ನಡೆಸುವುದು ಖಚಿತವಾಗದೆ. 

Advertisement

ಭಾರತ ತಂಡದ ಕೋಚ್‌ ಲೂಯಿಸ್‌ ನಾರ್ಟನ್‌ ಡಿ ಮೆಟೊಸ್‌ ನಾಯಕತ್ವಕ್ಕೆ ನಾಲ್ವರನ್ನು ಆಯ್ಕೆ ಮಾಡಿದ್ದರು. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಉದ್ದೇಶದಿಂದ 27 ಆಟಗಾರರಿಗೆ ಮತದಾನಕ್ಕೆ ಅವ ಕಾಶ ನೀಡಿದ್ದರು. ಇದರಲ್ಲಿ ಅಮರ್ಜಿತ್‌ ಸಿಂಗ್‌ ಅತೀ ಹೆಚ್ಚು ಮತ ಪಡೆದಿದ್ದಾರೆ. 2ನೇ ಗರಿಷ್ಠ ಮತ ಪಡೆದ ಜಿತೇಂದ್ರ ಸಿಂಗ್‌ ಉಪನಾಯಕನಾಗಿ ಆಯ್ಕೆಯಾಗಬಹುದು. ಎಎಫ್ಸಿ ಕಪ್‌ನಲ್ಲಿ 16 ವರ್ಷ ದೊಳಗಿನ ಭಾರತ ತಂಡವನ್ನು ಮುನ್ನಡೆಸಿದ ಸುರೇಶ್‌ ಸಿಂಗ್‌ ಮೂರನೇ ಸ್ಥಾನ ಪಡೆದಿದ್ದಾರೆ. ಡಿಫೆಂಡರ್‌ ಸಂಜೀವ್‌ ಸ್ಟಾಲಿನ್‌ 4ನೇ ಸ್ಥಾನ ಪಡೆದರು. 

ನಾಯಕನ ಆಯ್ಕೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು. ವಿಶ್ವಕಪ್‌ ಪಂದ್ಯಾವಳಿ ಅ. 3ರಿಂದ 28ರ ವರೆಗೆ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next