Advertisement

ತಾರಕಾಸುರನಿಗೆ ಅಂಬರೀಶ್‌ ಸಾಥ್‌

11:34 AM Sep 04, 2018 | |

ಕೆಲವು ದಿನಗಳ ಹಿಂದೆ “ತಾರಕಾಸುರ’ ಚಿತ್ರತಂಡ ತಮ್ಮ ಚಿತ್ರದ ಮೊದಲ ಹಾಡನ್ನು ಕರ್ನಾಟಕದ ಗಣ್ಯವ್ಯಕ್ತಿಯೊಬ್ಬರು ಬಿಡುಗಡೆ ಮಾಡುತ್ತಾರೆಂದು ಹೇಳಿತ್ತು. ಯಾರು ಎಂಬ ಪ್ರಶ್ನೆಗೆ ಉತ್ತರಿಸಿದೇ ಕುತೂಹಲ ಕಾಯ್ದಿರಿಸಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

Advertisement

ಅದು ಹಿರಿಯ ನಟ ಅಂಬರೀಶ್‌. ಹೌದು, “ತಾರಕಾಸುರ’ ಚಿತ್ರದ ಮೊದಲ ಹಾಡನ್ನು ಅಂಬರೀಶ್‌ ಅವರು ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದು ನಾಯಕನ ಇಂಟ್ರೋಡಕ್ಷನ್‌ ಹಾಡಾಗಿದ್ದು, ಶಿವರಾಜಕುಮಾರ್‌ ಹಾಡಿದ್ದಾರೆ.

ಕವಿರಾಜ್‌ ಬರೆದ “ಕನ್ನಡ ಕಲಿಯೋ..’ ಎಂದು ಈ ಹಾಡನ್ನು ಆರಂಭವಾಗುತ್ತದೆ. ಚಿತ್ರವನ್ನು ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶಿಸಿದ್ದು, ವೈಭವ್‌ ನಾಯಕರರಾಗಿದ್ದಾರೆ. ಧರ್ಮವಿಶ್‌ ಸಂಗೀತ ಚಿತ್ರಕ್ಕಿದೆ. ನರಸಿಂಹಲು ಈ ಚಿತ್ರದ ನಿರ್ಮಾಪಕರು. 

Advertisement

Udayavani is now on Telegram. Click here to join our channel and stay updated with the latest news.

Next