ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿರುವ 180 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವಿಜಯಪುರ ಅಮಾನಿ(ದೊಡ್ಡ)ಕೆರೆ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಕೋಡಿ ಬಿದ್ದಿದೆ. ಜೊತೆಗೆ ಏರಿ ಬಿರುಕು ಬಿಟ್ಟಿರುವ ಹಿನ್ನೆಲೆ ಕೆರೆ ನೀರು ಸೋರಿಕೆಯಾಗುತ್ತಿದೆ. ಈ ಕಾರಣದಿಂದ ರೈತರಲ್ಲಿ ಆತಂಕ ಎದುರಾಗಿದೆ.
ತಾಲೂಕಿನ ಶಿವಪುರ ಕಲ್ಲುಕಟ್ಟೆ ಜಲಾಶಯ ತುಂಬಿ ಕೋಡಿ ಬಿದ್ದ ನೀರು ಅಧಿಕ ಪ್ರಮಾಣದಲ್ಲಿ ಹರಿದು ಬಂದ ಹಿನ್ನೆಲೆ ವಿಜಯಪುರ ಅಮಾನಿಕೆರೆ ಹಂತ ಹಂತ ವಾಗಿ ತುಂಬಿ ಶನಿವಾರ ಕೋಡಿ ಬಿದ್ದಿದೆ. ಈ ನೀರು ಮುಂ ದಿನ ನಲ್ಲೂರ ಅಮಾನಿಕೆರೆಗೆ ಹರಿದು ಹೋಗುತ್ತಿದೆ.
ಬಿರುಕುಬಿಟ್ಟ ಕೆರೆ ಏರಿ: ಮೂರು ವರ್ಷದ ನಂತರ ಕೆರೆ ತುಂಬಿರುವುದು ರೈತರಲ್ಲಿ ಸಂತಸ ಉಂಟು ಮಾಡಿ ರುವುದು ಒಂದೆಡೆಯಾದರೆ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕ ಮೂಡಿ ಸಿದೆ. ಕೆರೆ ಏರಿಯ ಹಲವು ಕಡೆ ಬಿರುಕು ಕಾಣಿಸಿ ಕೊಂಡಿದ್ದು, ಹಲವು ಕಡೆ ಸಣ್ಣ ಪ್ರಮಾಣದಲ್ಲಿ, ಮತ್ತೆ ಕೆಲವೆಡೆ ದೊಡ್ಡ ಗಾತ್ರದಲ್ಲಿ ಬಿರುಕು ಬಿಟ್ಟಿದೆ. ಇದ ರಿಂದ ಏರಿಯಲ್ಲಿ ನೀರು ಸೋರಿಕೆಯಾಗುತ್ತಿದೆ.
ಏರಿ ದುರಸ್ತಿಗೆ ರೈತರ ಒತ್ತಾಯ: ವಿಜಯಪುರ ಅಮಾನಿ ಕೆರೆ ತುಂಬಿರುವ ಕಾರಣ ಏರಿ ಬಿಟ್ಟಿರುವ ಕಾರಣ ಆತಂಕ ಎದುರಾಗಿದ್ದು, ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಶೀಘ್ರವಾಗಿ ಏರಿ ದುರಸ್ತಿ ಪಡಿಸಿ, ಒತ್ತುವರಿ ತೆರವು ಮಾಡುವಂತೆ ರೈತ ಮುಖಂಡರಾದ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ವಿಜಯಪುರ ಅಮ್ಮಾನಿಕೆರೆಗೆ ಒಳ ಹರಿವಿನ ಪ್ರಮಾಣ ಹೆಚ್ಚಳವಾದ ಕಾರಣದ ಕೆಲವೆಡೆ ಕೆರೆ ಏರಿ ಬಿರುಕು ಬಿಟ್ಟಿದೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ಕೆರೆ ಕೋಡಿ ಬೀಳುವ ಜಾಗದಲ್ಲಿ ನಿರ್ಮಿಸಿದ ಏರಿಯನ್ನು ಜೆಸಿಬಿ ಮೂಲಕ ಒಡೆದು ಹಾಕಿ ನೀರಿನ ಹೊರ ಹರಿವು ಹೆಚ್ಚಿನ ಪ್ರಮಾಣದಲ್ಲಿ ಹೊರಗೆ ಹೋಗುವಂತೆ ಮಾಡಿದ್ಧಾರೆ. ಆದರೆ ಅವೈಜ್ಞಾನಿಕವಾಗಿ ಕೆರೆ ಏರಿ ಒಡೆದಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಹಾಗೂ ರೈತರು ಆಕ್ರೋಶ ಹೊರಹಾಕಿದ್ದಾರೆ.