ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ನೀರು ದುರ್ವಾಸನೆ ಬರುತ್ತಿದ್ದರೂ ಈ ನೀರನ್ನೇ ಪಟ್ಟಣಕ್ಕೆ ಕುಡಿಯಲು ಬಳಕೆ ಮಾಡುತ್ತಿರು ವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಸುಮಾರು 2000 ಕ್ಕೂ ಹೆಚ್ಚು ಮನೆಗಳಿದ್ದು, ಇವುಗಳಿಗೆ ಕುಡಿಯುವ ನೀರು ಒದಗಿಸಲು 20ಕ್ಕೂ ಹೆಚ್ಚಿನ ಕೊಳವೆಬಾವಿಗಳು ಇದ್ದು, ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕ ಡಿಮೆಯಾಗಿ , ಕುಡಿಯುವ ನೀರಿನ ಸರಬರಾಜುಗೆ ಪಟ್ಟಣ ಪಂಚಾಯತಿ ಹೆಣಗಾಡುತ್ತಿದ್ದೆ.
ಕೊಳವೆಬಾವಿ ನೀರು ಪೂರೈಸಲು ಆಗ್ರಹ: ಈ ಸಮಯದಲ್ಲಿ ಕುಡಿ ಯುವ ನೀರಿನ ತೊಂದರೆ ನೀಗಿಸಲು ಪಟ್ಟಣ ಪಂಚಾಯಿತಿ ಯವರು ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧೀಕರಣ ಮಾಡಿ, ಮನೆಗಳಿಗೆ ಒದಗಿಸುತ್ತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಕೆರೆ ನೀರು ದುರ್ವಾಸನೆ ಬೀರುತ್ತಿದ್ದು, ಈ ನೀರನ್ನು ಸರಿಯಾಗಿ ಶುದ್ಧೀಕರಣ ಮಾಡಿ, ಪಟ್ಟಣಕ್ಕೆ ಒದಗಿಸುತ್ತಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮನೆಗಳಿಗೆ ಕೆರೆ ನೀರು ಒದಗಿಸುವುದನ್ನು ನಿಲ್ಲಿಸಿ ಕೊಳವೆಬಾವಿ ನೀರು ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆಟ್ಟು ನಿಂತ ಘಟಕ: ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು, ಬಾಗೇಪಲ್ಲಿ ಸಮೀಪದ ಪರಗೋಡು ಗ್ರಾಮದ ಚಿತ್ರಾವತಿ ನದಿ ನೀರನ್ನು ಗುಡಿಬಂಡೆ ಪಟ್ಟಣದ ಹೊರ ಹೊಲಯದಲ್ಲಿ ಶುದ್ಧೀಕರಣ ಘಟಕ ಪ್ರಾರಂಭ ಮಾಡಿ ನೀರು ಒದಗಿಸುತ್ತಿದ್ದರು. ನಂತರದ ದಿನಗಳಲ್ಲಿ ಈ ಘಟಕ ಕೆಟ್ಟು ನಿಂತು, ಮೂಲೆ ಗುಂಪಾಗಿದ್ದು, ಈಗ ಇದೇ ಘಟಕದಲ್ಲಿ ಅಮಾನಿಬೈರಸಾಗರ ನೀರನ್ನು ಕೇವಲ ಆಲಂ ಹಾಕಿ, ಸರಿಯಾಗಿ ಶುದ್ಧೀಕರಣ ಮಾಡದೇ ನೀರು ಬಿಡುತ್ತಿದ್ದು, ಮನೆಗೆ ಬರುವ ಕೆರೆ ನೀರು ವಾಸನೆ ಬರು ತ್ತಿದೆ ಎಂಬ ಆರೋಪ ನಿವಾಸಿಗಳಿಂದ ಕೇಳಿಬರುತ್ತಿದೆ.
ದುರಸ್ತಿಪಡಿಸದ ಕೊಳವೆ ಬಾವಿಗಳು: ಪಟ್ಟಣದಲ್ಲಿ 2-3 ವರ್ಷಗಳಿಂದ ಸುಮಾರು 10 ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಇವುಗಳಿಗೆ ಪಂಪ್ ಮೋಟಾರು, ಪೈಪ್‌ಗ್ಳನ್ನು ಅಳವಡಿಸಿ, ಖಜಾನೆಯಿಂದ ಹಣ ಸಹ ಡ್ರಾ ಮಾಡಲಾಗಿದೆ. ಆದರೆ ಕೊಳವೆಬಾವಿ ಕೊರೆಯಿಸಿದಾಗ ಮಾತ್ರ ಬಂದ ನೀರು, ಪಂಪ್ ಮೋಟಾರು ಅಳವಡಿಸಿದಾಗ ನೀರು ಬಾರದೆ ನಿರುಪಯುಕ್ತವಾಗಿವೆ. ಇನ್ನು ಹಳೇ ಕೊಳವೆ ಬಾವಿಗಳಲ್ಲಿ ಕೆಲವಕ್ಕೆ ಪಂಪು ಮೋಟಾರು ಸುಟ್ಟು ಹೋಗಿ, ನೀರು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಂಪು, ಮೋಟಾರು ದುರಸ್ತಿಪಡಿಸದೇ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.
ಮೂಲೆ ಸೇರಿದ ಯಂತ್ರಗಳು: ಶುದ್ಧೀಕರಣ ಘಟಕವನ್ನು ಪುನರ್ ಪ್ರಾರಂಭಿಸಲು ಪಟ್ಟಣ ಪಂಚಾಯಿತಿ ಬೇಕಾದ ಯಂತ್ರೋಪಕರಣಗಳನ್ನು ತರೆಸಿದ್ದು, ಅವುಗಳನ್ನು ಜೋಡಿಸಿ ಸರಿಯಾಗಿ ಶುದ್ಧೀಕರಣ ಮಾಡದೇ, ಯಂತ್ರೋಪಕರಣಗಳನ್ನು ಮೂಲೆಯಲ್ಲಿಡಲಾಗಿದೆ.
ಗುಡಿಬಂಡೆ ಪಟ್ಟಣಕ್ಕೆ ದುರ್ವಾಸನೆ ಬೀರುತ್ತಿರುವ ಕೆರೆ ನೀರನ್ನು ಬಿಡುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಜನರಿದ್ದಾರೆ. ಕೂಡಲೇ ಕೆರೆ ನೀರು ಸರಬರಾಜು ಮಾಡಲು ನಿಲ್ಲಿಸಬೇಕು.
● ನಾ.ರಾ.ವೆಂಕಟೇಶ್ ಮೂರ್ತಿ, ಸಮಾಜ ಸೇವಕರು, ಗುಡಿಬಂಡೆ
ಪಟ್ಟಣದಲ್ಲಿನ ಕೊಳವೆ ಬಾವಿಗಳು ಕೆಟ್ಟು ನಿಂತಿದ್ದು ಇದನ್ನು ದುರಸ್ತಿಪಡಿಸಿ, ಕೆರೆ ನೀರು ಬಳಕೆಯನ್ನು ನಿಲ್ಲಿಸಬೇಕು.
● ಬಿ.ಎ.ರಾಜೇಶ್, ಮಾಜಿ ಸದಸ್ಯರು, ಪಪಂ, ಗುಡಿಬಂಡೆ
ಪಟ್ಟಣದ ಅಮಾನಿ ಬೈರಸಾಗರ ಕೆರೆ ನೀರು ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದು, ನೀರನ್ನು ಲ್ಯಾಬ್‌ಗ ಪರೀಕ್ಷೆಗೆ ಕಳುಹಿಸುತ್ತಿದ್ದು, ಪರೀಕ್ಷಾ ವರದಿ ಬರುವವರೆಗೂ ನೀರನ್ನು ಮನೆಗಳಿಗೆ ಬಿಡದಂತೆ ಸಿಬ್ಬಂದಿಗೆ ತಿಳಿಸಲಾಗಿದೆ.
● ಸಬಾಶಿರನ್, ಮುಖ್ಯಾ ಧಿಕಾರಿ, ಪ.ಪಂ, ಗುಡಿಬಂಡೆ