Advertisement
ಈ ಸಂದರ್ಭ ಮಹಾಲಿಂಗ ಅವರು ತುಳುನಾಡಿನ ಕಾರ್ಮಿಕರು ಧರಿಸುವ ಮುಟ್ಟಾಳೆಯನ್ನು ಧರಿಸಿ ಗಮನ ಸೆಳೆದರು. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗೆ ನಮನ ಸಲ್ಲಿಸಿ ಪುರಸ್ಕಾರವನ್ನು ಸ್ವೀಕರಿಸಿದರು.
ಮಹಾಲಿಂಗ ಅವರು ಮೊಮ್ಮಗ ಉದಯ ಅವರೊಂದಿಗೆ ರವಿವಾರ ದಿಲ್ಲಿಗೆ ಪಯಣ ಬೆಳೆಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ವಿಮಾನ ಪ್ರಯಾಣಕ್ಕೂ ಮುನ್ನ ಮಹಾಲಿಂಗ ನಾಯ್ಕ ಅವರ ಯೋಗ ಕ್ಷೇಮ ವಿಚಾರಿಸಲಾಗಿತ್ತು. ಕ್ಯಾಬ್, ವಿಮಾನ ಪ್ರಯಾಣ ವೆಚ್ಚಗಳನ್ನು ಸರಕಾರವೇ ಭರಿಸಿತ್ತು. ಬೆಳಗ್ಗೆ ಕ್ಯಾಬ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಅವರು 11.55ರ ವಿಮಾನವನ್ನು ಏರಿದರು. ಅದು ಬೆಂಗಳೂರಿನ ಮೂಲಕ ದಿಲ್ಲಿಗೆ ಹಾರಿತು. ಸಂಜೆ 6ಕ್ಕೆ ದಿಲ್ಲಿಗೆ ತಲುಪಿ ಅಶೋಕ ಹೊಟೇಲಲ್ಲಿ ವಿಶ್ರಾಂತಿ ಪಡೆದರು.ಪ್ರಧಾನಿ, ರಾಷ್ಟ್ರಪತಿಯವರಲ್ಲಿ ಮರಾಟಿಯಲ್ಲಿ ಮಾತಾಡಿದೆ ಮಹಾಲಿಂಗ ನಾಯ್ಕ ಅವರು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿ, “ನನಗೆ ಇಂದು ಅತೀವ ಸಂತಸವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜತೆ ಮಾತನಾಡಿದೆ. ಹಿಂದಿ ಭಾಷೆ ಗೊತ್ತಿಲ್ಲದೇ ಇದ್ದರೂ ಮರಾಟಿ ಭಾಷೆಯಲ್ಲಿ ಮಾತನಾಡಿದೆ ಮತ್ತು ಅವರ ಭಾವದಲ್ಲಿ ಮಾತುಗಳನ್ನು ಅರ್ಥೈಸಿಕೊಂಡಿದ್ದೇನೆ. ನಾಳೆ ದಿಲ್ಲಿಯಲ್ಲಿ ಮಿಲಿಟರಿ ಭವನ ಇತ್ಯಾದಿ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಿ ಬಳಿಕ ಊರಿಗೆ ಹಿಂದಿರುಗಲು ವಿಮಾನದ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಮಾ. 30ಕ್ಕೆ ಊರಿಗೆ ತಲುಪುತ್ತೇನೆ ಎಂದರು.
Related Articles
ಅಮೈ ಮಹಾಲಿಂಗ ನಾಯ್ಕ ಅವರಿಗೆ ದಿಲ್ಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆ ಹುಟ್ಟೂರಾದ ಅಮೈಯಲ್ಲಿ ಟಿವಿ ವೀಕ್ಷಿಸುತ್ತ ಮಹಾಲಿಂಗ ನಾಯ್ಕ ಅವರ ಅಭಿಮಾನಿಗಳು, ಹಿತೈಷಿಗಳು ಸಂಭ್ರಮ ಪಟ್ಟರು.ಅವರ ಪತ್ನಿ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂಭ್ರಮಪಟ್ಟರು.
Advertisement