Advertisement
– ಚಂಡಮಾರುತದ ಪರಿಣಾಮ ಎಷ್ಟು ದಿನ ಇರುತ್ತದೆ ಎಂದು ವರದಿ ಬಂದಿದೆ? ನೀವು ಕೈಗೊಂಡ ಕ್ರಮಗಳೇನು?ಮಂಗಳವಾರ ಬೆಳಗ್ಗೆ 9.30ಕ್ಕೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ವರದಿ ಬಂತು. ವಿಷಯ ಗೊತ್ತಾದಾಗಲೇ ನಾವು ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಮ ಜರಗಿಸಿದ್ದೇವೆ, ಶಾಲೆಗಳಿಗೆ ರಜೆ ಸಾರಿ ದೆವು; ನಗರಸಭೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಗಳಿಗೂ ಜಾಗೃತರಾಗಿ ಇರುವಂತೆ ಸೂಚಿ ಸಿ ದೆವು. ನಾವು ಹೆಚ್ಚಿನ ಗಮನ ವನ್ನು ಉದ್ಯಾವರ ಮತ್ತು ಕಡೆಕಾರಿಗೆ ಕೊಡ ಬೇಕಾಯಿತು. ನಗರ ಸಭೆ ಪ್ರದೇಶ ದಲ್ಲಿಯೂ ನೆರೆ ಬಂದ ಪ್ರದೇಶ ಗಳ ಬಗೆಗೆ ಗಮನ ಹರಿಸಿ ದೆವು. ಇದುವರೆಗೆ ಬಂದ ಮಳೆ ಚಂಡ ಮಾರುತದ ಪರಿಣಾಮದ್ದು; ಇನ್ನು ಮುಂದೆ ಸಾಮಾನ್ಯ ಮುಂಗಾರು ಬರಲಿದೆ.
ಜಿಲ್ಲಾಡಳಿತ ವಿಫಲ ಎಂದು ಹೇಳಲು ಆಗದು. ಒಂದೇ ಸಮನೆ 250 ಮಿ.ಮೀ. ಮಳೆ ಬಂದರೆ ಯಾವ ಜಿಲ್ಲಾಡಳಿತಕ್ಕೂ ಏನೂ ಮಾಡಲಾಗದು. ಚರಂಡಿ ವ್ಯವಸ್ಥೆಯ ಸಾಮರ್ಥ್ಯ ಮೀರಿದಾಗ ಏನು ಮಾಡಬಹುದು? ಏಕಾಏಕಿ ಇಂತಹ ಘಟನೆ ನಡೆದಾಗ ಕಷ್ಟವಾಗುತ್ತದೆ. ಆದರೂ ಮಂಗಳವಾರ ಅಪರಾಹ್ನ ಮಂಗಳೂರಿನಲ್ಲಿ ನಿಯಂತ್ರಣಕ್ಕೆ ಬಂತು. ಮಳೆ ಬರುತ್ತಲೇ ಇರುವಾಗ ಅದನ್ನು ನಿರ್ವಹಿಸುವುದು ಕಷ್ಟ. ಇಲ್ಲಿ ನಾವು ನಿಯಂತ್ರಣ ಕೊಠಡಿಯನ್ನು ತೆರೆದು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ 24 ಗಂಟೆಯೂ ಜಾಗೃತ ಸ್ಥಿತಿ ಯಲ್ಲಿರಲು ಸೂಚಿಸಿದ್ದೇವೆ. - ಸಾಮಾನ್ಯವಾಗಿ ನಗರಗಳಲ್ಲಿ ಕಾನೂನನ್ನು ಗಾಳಿಗೆ ತೂರಿ ಬೃಹತ್ ಕಟ್ಟಡ ನಿರ್ಮಿಸಿ ಕೃತಕ ಅಪಾಯಗಳನ್ನು ಸೃಷ್ಟಿಸು ತ್ತಿದ್ದಾರೆ. ಇದಕ್ಕೆ ಏನನ್ನುತ್ತೀರಿ?
ನೀರು ಹರಿದು ಹೋಗುವ ಜಾಗ ಗಳನ್ನು ಪರಿಗಣಿಸದೆ ಕಟ್ಟಡಗಳನ್ನು ನಿರ್ಮಿಸುತ್ತಿರುವುದರಿಂದ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಭೂಪರಿವರ್ತನೆ ಮಾಡುವಾಗ ಇವುಗಳನ್ನು ಗಮನಿಸಬೇಕು. ಭೂ ಪರಿವರ್ತನೆ ಮಾಡುವಾಗ ನಾವು ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣೆ ಪತ್ರ (ಎನ್‌ಒಸಿ) ಕೇಳುತ್ತೇವೆ. ಅವರು ನೀರು ಹರಿದುಹೋಗುವ ದಾರಿ ಬಿಟ್ಟು ಎಲ್ಲಿ ಕಟ್ಟಡ ಕಟ್ಟಬಹುದು ಎಂದು ನೋಡಿ ಶಿಫಾರಸು ಮಾಡಬೇಕು. ಆದರೆ ಇದು ಎಷ್ಟರ ಮಟ್ಟಿಗೆ ಆಗುತ್ತಿದೆ ಎನ್ನುವುದೇ ಪ್ರಶ್ನೆ. ಹಳ್ಳಿಗಳಲ್ಲಿ ಕೃಷಿ ವಲಯದಲ್ಲಿ ಮನೆ ನಿರ್ಮಿಸುವಾಗಲೂ ನೀರು ಹರಿದು ಹೋಗಲು ಅವಕಾಶ ಕೊಟ್ಟಿರಬೇಕು.
Related Articles
ದೂರವಾಣಿ ಕರೆ ಸ್ವೀಕರಿಸಲೇ ಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.
Advertisement
ಶಿಸ್ತುಕ್ರಮಕ್ಕಿಂತ ಜನಜಾಗೃತಿ ಮುಖ್ಯನಿರ್ಮಾಣ ಕಾಮಗಾರಿಗಳಿಗೆ ಕಾನೂನು ಮೀರಿ ಅವಕಾಶ ಕೊಟ್ಟಾಗ ಅದರ ವಿರುದ್ಧ ಕ್ರಮ ಕೈಗೊಳ್ಳು ವಂತಿರಬೇಕು. ಆದರೆ ಇದಕ್ಕೂ ಮಿಗಿಲಾಗಿ ನಿರ್ಮಾಣಕಾರರು ಮತ್ತು ಜನರೇ ಜಾಗೃತರಾಗುವುದು ಮುಖ್ಯ. ತಾವೇ ನಿರ್ಮಿಸುವ ಕಟ್ಟಡಗಳಿಂದ ತಮಗೇ ಅಪಾಯವಾಗುವ ಸ್ಥಿತಿಯ ಕುರಿತು ಜನರಲ್ಲಿ ಸ್ವಯಂ ಜಾಗೃತಿ ಮೂಡ ಬೇಕು; ಅದನ್ನು ಮೂಡಿಸುವ ಕೆಲಸ ಆಗಬೇಕು. ನಗರಾಭಿವೃದ್ಧಿ ಪ್ರಾಧಿಕಾರಗಳೂ ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅವರು ಕಾನೂನು ಚೌಕಟ್ಟು ಮೀರಿ ನಡೆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿ ದರೆ ಕ್ರಮ ಕೈಗೊಳ್ಳಬಹುದು. ಸರಿಯಾದ ಪುರಾವೆ, ದೂರುಗಳು ಬೇಕು. ಹೀಗೆ ಮಾಡದಂತೆ ಸೂಚನೆ ಕೊಡುತ್ತೇವೆ. ಚರಂಡಿ ನೀರು ಹರಿದು ಹೋಗದೆ ಇರಲು ಕೆಲವೆಡೆ ಅತಿಕ್ರಮಣ ಮಾಡಿಕೊಂಡ ಸಾರ್ವಜನಿಕರು ಕಾರಣ. ಕಾಪುವಿನಲ್ಲಿ ಹೀಗೆ ಆಗಿರುವುದು ಬುಧವಾರ ಕಂಡು ಬಂದಿದೆ. ಅತಿಕ್ರಮಣ ಮಾಡಿಕೊಂಡು ಅದರ ಮೇಲೆ ಸ್ಲಾಬ್ ಹಾಕಿದರೆ ತ್ಯಾಜ್ಯ ತುಂಬಿ ನೀರು ಹರಿದುಹೋಗುವುದಿಲ್ಲ. ಜನರೂ ಅರ್ಥ ಮಾಡಿಕೊಳ್ಳಬೇಕು.