Advertisement
ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ ಗುಜರಾತ್ನ್ ರಂಗ್ ಮಲ್ಹರ್ದಿ ಫೋಕ್ ಆಟ್Òì ತಂಡದಿಂದ ಪ್ರಸ್ತುತಗೊಂಡ “ಗುಜರಾತಿ ಜಾನಪದ ನೃತ್ಯ’ಗಳು ಎಲ್ಲರನ್ನೂ ಆಕರ್ಷಿಸುವಲ್ಲಿ ಸಫಲವಾಗಿದೆ.
Related Articles
Advertisement
ರಂಗ್ ಮಲ್ಹರ್ದಿ ಫೋಕ್ ಆರ್ಟ್ಸ್ ಗುಜರಾತ್ನ ಪ್ರಸಿದ್ಧ ಜಾನಪದ ನೃತ್ಯ ಕಲಾತಂಡವಾಗಿದ್ದು, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುವ ಮೂಲಕ ಜನ ಮೆಚ್ಚುಗೆ ಪಡೆದಿದೆ.ತಂಡದ ನಿರ್ದೇಶಕ ಪೃಥ್ವಿ ಷಾ ಹಾಗೂ ಇತರರು ಉಪಸ್ಥಿತರಿದ್ದರು. ಶ್ರಾವ್ಯ ಶೆಟ್ಟಿ ನಿರೂಪಿಸಿದರು.
ಆಳ್ವಾಸ್ ಸಾಂಸ್ಕೃತಿಕ ವೈಭವಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಸುಮಾರು ಒಂದು ಸಾವಿರಷ್ಟು ವಿದ್ಯಾರ್ಥಿಗಳು ವಿವಿಧ ನೃತ್ಯ, ಕಸರತ್ತುಗಳನ್ನು ಪ್ರದರ್ಶಿಸಿದರು. ಕೇರಳ ಚೆಂಡೆ ಶೃಂಗಾರಿ ಮೇಳ, ಮಣಿಪುರ ಹಾಗೂ ರಾಜ್ಯದ ವಿದ್ಯಾರ್ಥಿಗಳನ್ನೊಳಗೊಂಡ ಮಣಿ ಪುರದ ಸ್ಟಿಕ್ ಡಾನ್ಸ್, ವಿ| ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ಓಂ… ಶಂಭೋ ಶಿವ ಶಂಭೋ ಎನ್ನುತ್ತಾ ಭರತನಾಟ್ಯ, ನೆಲದ ಅಪ್ಪಟ ದೇಸೀ ಕಲೆ ಮಲ್ಲ ಕಂಬದ ಸಾಹಸ ಪ್ರದರ್ಶನಗೊಂಡಿತು. ಅರೆಹೊಳೆ ಪ್ರತಿಷ್ಠಾನದ ಶ್ವೇತಾ ಅರೆಹೊಳೆ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ನೃತ್ಯ ರೂಪಕ ಪ್ರಸ್ತತಗೊಂಡಿತು.ನಿತೇಶ್ ಮಾರ್ನಾಡ್ ಅವರು ನಿರೂಪಿಸಿದರು.