Advertisement

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

01:12 AM Dec 12, 2024 | Team Udayavani |

ಮೂಡುಬಿದಿರೆ: ಗುಜರಾತಿನ ಅತ್ಯಂತ ಪ್ರಸಿದ್ಧ ಜಾನಪದ ನೃತ್ಯ ನವರಾತ್ರಿ ಸಂದರ್ಭದಲ್ಲಿ ಕುಣಿಯುವ ಗರ್ಬಾ, ಬಣ್ಣ ಬಣ್ಣದ ಕೋಲು, ಕೊಡೆಗಳನ್ನು ಹಿಡಿದು ನೃತ್ಯಮಾಡುವ ದಾಂಡಿಯಾರಾಸ್‌, ಕೃಷ್ಣ ರಾಧೆಯರ ಕಥೆಯನ್ನು ನೆನಪಿಸುವ ಭವಾಯಿ ಸಹಿತ ವಿವಿಧ ನೃತ್ಯಗಳನ್ನೊಳಗೊಂಡ ಗುಜರಾತಿ ಜಾನಪದ ನೃತ್ಯ ಪ್ರಕಾರಗಳು ವಿರಾಸತ್‌ನಲ್ಲಿ ಪ್ರೇಕ್ಷಕರನ್ನು ಮುದಗೊಳಿಸಿತು.

Advertisement

ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ಬುಧವಾರ ಗುಜರಾತ್‌ನ್‌ ರಂಗ್‌ ಮಲ್ಹರ್‌ದಿ ಫೋಕ್‌ ಆಟ್‌Òì ತಂಡದಿಂದ ಪ್ರಸ್ತುತಗೊಂಡ “ಗುಜರಾತಿ ಜಾನಪದ ನೃತ್ಯ’ಗಳು ಎಲ್ಲರನ್ನೂ ಆಕರ್ಷಿಸುವಲ್ಲಿ ಸಫ‌ಲವಾಗಿದೆ.

ಗರ್ಬಾ ನೃತ್ಯದ ಮೂಲಕ ಯುವತಿಯರು, ಸೌರಾಷ್ಟ್ರ ದ ಮೆಹರ್‌ ಸಮುದಾಯದ ನೃತ್ಯ ಪ್ರಕಾರ ಡಾಂಡಿಯಾ ಮಾದರಿಯ ಮಣಿಯಾರೋ ರಾಸ್‌ನಲ್ಲಿ ಯುವಕರು ರಂಜಿಸಿದರು. ಮಿಶ್ರ ರಾಸ್‌ನಲ್ಲಿ ಯುವಕ- ಯುವತಿಯರು ಒಟ್ಟಾಗಿ ಕುಣಿದು ರಂಜಿಸಿದರು.

ಮುಂಗಾರು ಸಂದರ್ಭದಲ್ಲಿ ಕೃಷಿ ಕಾಯಕಕ್ಕೆ ಸಂಬಂಧಿಸಿದ ದೇವರನ್ನು ಹೊತ್ತು ಡೋಲು, ಬಿಲ್ಲು ಬಾಣ, ಕತ್ತಿ ಇತ್ಯಾದಿ ಹಿಡಿದು ಮಾಡಿದ ಗುಡ್ಡಗಾಡು ಜನರ ನೃತ್ಯ ವಂತೂ ಅಲ್ಲಿನ ಕೃಷಿ ಸಂಸ್ಕೃತಿಯನ್ನು ಪರಿಚಯಿಸಿತು.

ತಾಲೀಮು ಮಾದರಿಯಲ್ಲಿ ಸಮರ ಕಲೆಯನ್ನು ಪ್ರತಿ ಬಿಂಬಿಸುವ ನೃತ್ಯ, ದೇವಿ ಆರಾಧನಾ ನೃತ್ಯ ಸಹಿತ ಹಲವು ನೃತ್ಯಗಳನ್ನು ಪ್ರದರ್ಶಿಸಿದರು.

Advertisement

ರಂಗ್‌ ಮಲ್ಹರ್‌ದಿ ಫೋಕ್‌ ಆರ್ಟ್ಸ್ ಗುಜರಾತ್‌ನ ಪ್ರಸಿದ್ಧ ಜಾನಪದ ನೃತ್ಯ ಕಲಾತಂಡವಾಗಿದ್ದು, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುವ ಮೂಲಕ ಜನ ಮೆಚ್ಚುಗೆ ಪಡೆದಿದೆ.ತಂಡದ ನಿರ್ದೇಶಕ ಪೃಥ್ವಿ ಷಾ ಹಾಗೂ ಇತರರು ಉಪಸ್ಥಿತರಿದ್ದರು. ಶ್ರಾವ್ಯ ಶೆಟ್ಟಿ ನಿರೂಪಿಸಿದರು.

ಆಳ್ವಾಸ್‌ ಸಾಂಸ್ಕೃತಿಕ ವೈಭವ
ಆಳ್ವಾಸ್‌ ಸಾಂಸ್ಕೃತಿಕ ವೈಭವದಲ್ಲಿ ಸುಮಾರು ಒಂದು ಸಾವಿರಷ್ಟು ವಿದ್ಯಾರ್ಥಿಗಳು ವಿವಿಧ ನೃತ್ಯ, ಕಸರತ್ತುಗಳನ್ನು ಪ್ರದರ್ಶಿಸಿದರು. ಕೇರಳ ಚೆಂಡೆ ಶೃಂಗಾರಿ ಮೇಳ, ಮಣಿಪುರ ಹಾಗೂ ರಾಜ್ಯದ ವಿದ್ಯಾರ್ಥಿಗಳನ್ನೊಳಗೊಂಡ ಮಣಿ ಪುರದ ಸ್ಟಿಕ್‌ ಡಾನ್ಸ್‌, ವಿ| ದೀಪಕ್‌ ಕುಮಾರ್‌ ಪುತ್ತೂರು ನಿರ್ದೇಶನದಲ್ಲಿ ಓಂ… ಶಂಭೋ ಶಿವ ಶಂಭೋ ಎನ್ನುತ್ತಾ ಭರತನಾಟ್ಯ, ನೆಲದ ಅಪ್ಪಟ ದೇಸೀ ಕಲೆ ಮಲ್ಲ ಕಂಬದ ಸಾಹಸ ಪ್ರದರ್ಶನಗೊಂಡಿತು. ಅರೆಹೊಳೆ ಪ್ರತಿಷ್ಠಾನದ ಶ್ವೇತಾ ಅರೆಹೊಳೆ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ನೃತ್ಯ ರೂಪಕ ಪ್ರಸ್ತತಗೊಂಡಿತು.ನಿತೇಶ್‌ ಮಾರ್ನಾಡ್‌ ಅವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next