Advertisement
ಆಳ್ವಾಸ್ ವಿರಾಸತ್ನ ಪ್ರಧಾನ ವೇದಿಕೆ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಸಮೀಪದಲ್ಲೇ ಕೃಷಿ ಸಿರಿ ಅನಾವರಣಗೊಂಡಿದೆ. ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿ ಸಿರಿ ಮೇಳಗಳ ಆವರಣ ಮನ ತಣಿಸುತ್ತಿದೆ. ಇಲ್ಲಿ ಬರೋಬ್ಬರಿ 60 ವಿಧಗಳ ತರಕಾರಿಗಳಿವೆ.
Related Articles
ಇಸ್ರೇಲ್ ತಂತ್ರಜ್ಞಾನ ಬಳಸಿ ಹಾಗಲಕಾಯಿ, ಕುಂಬಳಕಾಯಿ, ಹರಿವೆ, ಬೆಂಡೆಕಾಯಿ, ಬದನೆ, ಪಡುವಲಕಾಯಿ ಹಾಗೂ ಇನ್ನಿತರ ತರಕಾರಿಗಳನ್ನು ಇಲ್ಲಿ ಬೆಳೆಯಲಾಗಿದೆ. ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.
Advertisement
ವಿದ್ಯಾರ್ಥಿಗಳಿಗೆ ಕೃಷಿ ಪಾಠ!ಕೃಷಿ ಸಿರಿಯ ಜತೆಗೆ ಇಲ್ಲಿ 3 ಲಕ್ಷಕ್ಕೂ ಅ ಧಿಕ ಹೂ ಗಿಡಗಳಿರುವುದು ವಿಶೇಷ. ಆಳ್ವಾಸ್ ಕ್ಯಾಂಪಸ್ ಬಗೆಬಗೆಯ ಹೂ ಗಿಡಗಳಿಂದ ಆಕರ್ಷಣೀಯವಾಗಿ ಕಂಗೊಳಿಸುತ್ತಿದೆ. 6 ತಿಂಗಳುಗಳಿಂದ ಇದಕ್ಕೆ ಸಿದ್ಧತೆ ಮಾಡಲಾಗಿದೆ. ಹಲವು ಹೂ ಗಿಡಗಳನ್ನು ಇತರ ಜಿಲ್ಲೆ, ರಾಜ್ಯದಿಂದ ತರಿಸಲಾಗಿದೆ. ಸಂಗೀತ, ಸಾಂಸ್ಕೃತಿಕ ದ ಜತೆಗೆ ಇಲ್ಲಿ ಹೂ ಗಿಡ, ತರಕಾರಿ, ಕೃಷಿಯ ಅನುಭೂತಿ ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗಂತು ಇದು ಕಲಿಕೆಯ ತಾಣ.