Advertisement
ಆಳ್ವಾಸ್ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ಬಳಗದವರು ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಗಾಯನ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಿತು.
Related Articles
Advertisement
ವಾದಿರಾಜರ ರಚನೆಯ ‘ಒಂದು ಬಾರಿ ಸ್ಮರಣೆ ಸಾಲದೇ ಆನಂದ ತೀರ್ಥರ, ಪೂರ್ಣ ಪ್ರಜ್ಞರಾ….ಎಂದು ಭೈರವಿ ರಾಗದಲ್ಲಿ ಹಾಡಿ ಕಛೇರಿ ಕೊನೆಗೊಳಿಸಿದರು.
ಹಾರ್ಮೋನಿಯಂನಲ್ಲಿ ನರೇಂದ್ರ ಎಲ್. ನಾಯಕ್, ತಬಲಾದಲ್ಲಿ ಕೇಶವ ಜೋಷಿ ಮತ್ತು ವಿಘ್ನೇಶ್ ಕಾಮತ್ ಹಾಗೂ ತಾನ್ ಪುರಾ (ತಂಬೂರಿ)ದಲ್ಲಿ ರಮೇಶ ಕೋಲಕುಂದ ಮತ್ತು ರಾಘವ ಹೆಗಡೆ ಶಿರಸಿ ಹಾಗೂ ತಾಳದಲ್ಲಿ ವಿನೀತ್ ಭಟ್ ಸಾಥ್ ನೀಡಿದರು.
ಡಾ| ಎಂ. ಮೋಹನ ಆಳ್ವ, ಮಾಜಿ ಸಚಿವ ಅಭಯ ಚಂದ್ರ ಜೈನ್ ಮತ್ತು ಕ್ಯಾ| ಗಣೇಶ್ ಕಾರ್ಣಿಕ್ ಕಲಾವಿದರನ್ನು ಗೌರವಿಸಿದರು.
ಇದಕ್ಕಿಂತ ಸಂತೋಷ ಇನ್ನೇನಿದೆ…!ವಾಹ್…ವಿದ್ಯಾರ್ಥಿಗಳು, ಹೆತ್ತವರು, ಸಂಗೀತ ಪ್ರಿಯರ ಸಂಗೀತ ಪ್ರೀತಿಯ ಕಂಡು ಬಹಳ ಸಂತೋಷ ಆಯಿತು. ಹಾಡಲು ಅದೇ ಹೊಸ ಹುರುಪು ಕೊಟ್ಟಿತು. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದು ಪಂ| ವೆಂಕಟೇಶ್ ಕುಮಾರ್ ಭಾವುಕರಾದರು.