Advertisement
ಅತಿಥಿ ದೇವೋಭವ ಆತಿಥ್ಯಕ್ಕೆ ಮನಸೋತ ಮಕ್ಕಳು, ಗಣ್ಯಾತಿಗಣ್ಯರು
Related Articles
21 ಕಡೆಗಳಲ್ಲಿ ಪಾಕ ಶಾಲೆ ಗಳನ್ನು ನಿರ್ವ ಹಿಸಲಾಗುತ್ತಿದ್ದು, ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ-ಉಪಾಹಾರದ ವ್ಯವಸ್ಥೆಯಿದೆ. ಬೆಳಗ್ಗೆ ಬಾಳೆಹಣ್ಣು, ಬ್ರೆಡ್, ಜಾಮ್, ಹಾಲಿನೊಂದಿಗೆ ದೈನಂದಿನ ಮೆನುವಿನಲ್ಲಿರುವ ಊಟ ತಿಂಡಿಗಳನ್ನೂ ಒದಗಿಸಲಾಗುತ್ತಿದೆ. ಮಧ್ಯಾಹ್ನದ ಊಟ ವನ್ನು ಸ್ವೀಟ್, ಪಾಯಸದೊಂದಿಗೆ ವಿತರಿಸ ಲಾಗುತ್ತಿದೆ. 300ಕ್ಕೂ ಅಧಿಕ ಸಂಖ್ಯೆಯಲ್ಲಿ ಅಡುಗೆಯವರು, ಸ್ವಯಂ ಸೇವ ಕರು 24 ಗಂಟೆ ಸೇವೆ ನೀಡುತ್ತಿದ್ದಾರೆ. ಅಕ್ಕಿ, ಸಕ್ಕರೆ, ಕಾಯಿ ಸಾಕಷ್ಟು ಪ್ರಮಾಣದಲ್ಲಿ ಪ್ರಮಾಣದಲ್ಲಿ ಹೊರೆಕಾಣಿಕೆ ಮೂಲಕ ಸಂಗ್ರಹವಾಗಿದೆ. ಇತರ ಅಗತ್ಯ ವಸ್ತುಗಳನ್ನು ಬೇಡಿಕೆಗೆ ತಕ್ಕಂತೆ ತರಿಸಿಕೊಳ್ಳಲಾಗುತ್ತಿದೆ ಎಂದು ಊಟೋಪಚಾರ ವಿಭಾಗದ ಉಸ್ತುವಾರಿ ರಂಗೋಲಿ ಚಂದ್ರ ಹಾಸ ಶೆಟ್ಟಿ ತಿಳಿಸಿದ್ದಾರೆ.
Advertisement
ವಿದ್ಯಾರ್ಥಿಗಳಿಗೆ ವ್ಯವಸ್ಥೆವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಅಗತ್ಯ ವಸ್ತುಗಳಾದ ಬಕೆಟ್, ಮಗ್‌ಗಳನ್ನು ಇರಿಸಲಾಗಿದೆ. ಅಧಿಕಾರಿಗಳಿಗೆ ಬೆಡ್, ಬೆಡ್‌ಶೀಟ್‌ಗಳನ್ನು ಒದಗಿಸಲಾಗಿದೆ. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳ ಲಾಗುತ್ತಿದೆ ಎನ್ನುತ್ತಾರೆ ವಸತಿ ವಿಭಾಗದ ಉಸ್ತುವಾರಿ ಪ್ರತೀಕ್ ಕುಮಾರ್ ಶೆಟ್ಟಿ. ವಾಹನ ಸೌಲಭ್ಯ
ವಿವಿಧೆಡೆ ವಾಸ್ತವ್ಯ ಹೂಡಿರುವವರನ್ನು ಕರೆತರಲು ಮತ್ತು ಮರಳಿ ಬಿಡಲು 120 ಬಸ್‌ಗಳಿವೆ. ವಿಐಪಿ ಗಳಿಗಾಗಿ ಬಾಡಿಗೆ ಕಾರುಗಳು, ವ್ಯಾನ್‌ಗಳನ್ನು ಸನ್ನದ್ಧವಾಗಿ ಇರಿಸ ಲಾಗಿದೆ.ವಿದ್ಯಾರ್ಥಿಗಳಿ ರುವ ಹಾಸ್ಟೆಲ್‌ಗಳಿಗೆ 24 ಗಂಟೆಯೂ ನೀರು ಪೂರೈಕೆ ಇದೆ. ದಿನದ ವಿಶೇಷ
ಎಂದಿನ ಸ್ಕೌಟ್ಸ್-ಗೈಡ್ಸ್ ಸಾಹನ ಪ್ರದರ್ಶನಗಳು ನಡೆದವು. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ 100ಕ್ಕೂ ಅಧಿಕ ಟಾಸ್ಕ್ಗಳ ಮೂಲಕ ಪ್ರತಿಭೆ ಪ್ರದರ್ಶಿಸಿದರು. 1 ಸಾವಿರ ಮಂದಿ ಪಿಲಿಕುಳಕ್ಕೆ ಭೇಟಿ ನೀಡಿದರು. 2 ಸಾವಿರ ಮಂದಿ ಶ್ರಮದಾನದಲ್ಲಿ, 500 ಮಂದಿ ಬೀಚ್‌ವಾಕ್‌ನಲ್ಲಿ ಪಾಲ್ಗೊಂಡರು. ಕೆಲವರು ಕಡಲ ಕೆರೆ, ಅಲಂಗಾರು, ಸಾವಿರ ಕಂಬದ ಬಸದಿ ಮೊದಲಾದೆಡೆಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ವೀಕ್ಷಿಸಿದರು. ವಿವಿಧ ಮೇಳಗಳು, ಪ್ರದರ್ಶನಗಳು ಎಂದಿನಂತೆ ತುಂಬಿ ತುಳುಕುತ್ತಿದ್ದವು. ವಿವಾಹ ಪದ್ಧತಿ ಪ್ರದರ್ಶನ
ಮೂಡುಬಿದಿರೆ: ಜಾಂಬೂರಿಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ- ತೊಡುಗೆಗಳೊಂದಿಗೆ ತಮ್ಮೂರಿನ ವಿವಾಹ ಪದ್ಧತಿಗಳ ಪ್ರದರ್ಶಿಸಿದರು. “ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲಾವಾರು ವಿವಾಹ ಪದ್ಧತಿಗಳ ಪ್ರದರ್ಶನವಿತ್ತು. ವಿದೇಶೀ ವಿದ್ಯಾರ್ಥಿಗಳು ಹಾಗೂ ಅಧಿಕಾರಿ ವರ್ಗದವರು ಭಾರತದ ವಿವಾಹ ಸಂಸ್ಕೃತಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.